ದಾಂಡೇಲಿ : ವಿವಾಹಿತ ವ್ಯಕ್ತಿಯೋರ್ವ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಳೆದಾಂಡೇಲಿಯ ಮದರಸಾ ಚಾಳದಲ್ಲಿ ನಡೆದಿದೆ. 37 ವರ್ಷ ವಯಸ್ಸಿನ ಪ್ರಾನ್ಸಿಸ್ ಪುಲ್ಲಯ್ಯ ಡಮ್ಮು ಎಂಬಾತನೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಸಾವಿಗೆ ನಿಖರ ಕಾರಣಗಳು ತಿಳಿದಿಲ್ಲ.

ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ
ಲೋಡಿಂಗ್ ವಿಭಾಗದಲ್ಲಿ ಕಾರ್ಮಿಕನಾಗಿದ್ದ ಈತ ಹಳೆದಾಂಡೇಲಿಯ ಮದರಸಾ ಚಾಳದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸವಾಗಿದ್ದನು. ಮನೆಯಲ್ಲಿ ಯಾರು ಇಲ್ಲದಿದ್ದ ಸಮಯದಲ್ಲಿ ಬ್ಲೇಡಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

RELATED ARTICLES  ಉತ್ತರಕನ್ನಡ ಜಿಲ್ಲೆಯ 'ಮಹಾದೇವ ವೆಳಿಪ್'ಗೆ ರಾಜ್ಯೋತ್ಸವ ಪ್ರಶಸ್ತಿ

ಮನೆಗೆ ತಾಯಿ ಬಂದು ನೋಡಿದಾಗ ಮಗ ಪ್ರಾನ್ಸಿಸ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿದ್ದ ಮೃತದೇಹವನ್ನು ಕಂಡು ಜನರು ಕಂಗಾಲಾಗಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

RELATED ARTICLES  ಮಕ್ಕಳ ಮೈ ಮನ ಪುಳಕಗೊಳಿಸಿದ "ರೇನಿ ಡೇ" : ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿನೂತನ ಕಾರ್ಯಕ್ರಮ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಾಹಿತಿಯ ಪ್ರಕಾರ ಕುಡಿತದ ಚಟವನ್ನು ಹೊಂದಿದ್ದನೆಂದು ತಿಳಿದು ಬಂದಿದ್ದು, ಕಳೆದ ಒಂದು ವರ್ಷದಿಂದ ಕೌಟುಂಬಿಕ ಕಲಹದಿಂದ ಮೃತನ ಹೆಂಡತಿ ತನ್ನ ತಾಯಿಯ ಮನೆಗೆ ತೆರಳಿದ್ದಳೆಂಬ ಮಾತುಗಳೂ ಕೇಳಿಬಂದಿದೆ.

Source : public Next