ಕುಮಟಾ : ತಾಲೂಕಿನ ಬಗ್ಗೋಣ ಕ್ರಾಸ್ ಸಮೀಪ ಅಂದರೆ ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ ಸರ್ಕಾರಿ ಆಸ್ಪತ್ರೆ ಬಳಿ ಕುರಿಗಳನ್ನ ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ಲೈಟ್ ಕಂಬಕ್ಕೆ ಡಿಕ್ಕಿಯಾಗಿ, ವಾಹನದ ಹಿಂಬದಿ ಕುಳಿತಿದ್ದ ಕುರಿಗಾಹಿಯ ಕಾಲು ಮುರಿದಿರುವ ಹಾಗೂ ಅಪಘಾತದ ರಭಸಕ್ಕೆ ಸ್ಥಳದಲ್ಲೇ ಏಳು ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.

RELATED ARTICLES  ಅಸಮರ್ಪಕವಾದ ರಸ್ತೆ ಶವವನ್ನು ಮೂರು ಕಿ.ಮೀ.ವರೆಗೆ ಜೋಲಿಯಂತೆ ಕಟ್ಟಿಕೊಂಡು ಹೊತ್ತೊಯ್ದ ಜನರು.

ತಡರಾತ್ರಿ 2 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಕಂಬಕ್ಕೆ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದರಿಂದ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಪಿಕಪ್ ವಾಹನದ ಮುಂಭಾಗ ಇಬ್ಬಾಗವಾದಂತೆ ಭಾಸವಾಗುವಷ್ಟು ರಭಸವಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇದರಿಂದಾಗಿ 30ಕ್ಕೂ ಅಧಿಕ ಕುರಿಗಳನ್ನು ಸಾಗಿಸುತ್ಯಿದ್ದ ವಾಹನದಲ್ಲಿದ್ದ ಏಳು ಕುರಿಗಳು ಸಾವನ್ನಪ್ಪಿದೆ.

ಇದನ್ನೂ ಓದಿ – ಗ್ರಹಣದ ವಿಚಾರದಲ್ಲಿ ರಾಮಚಂದ್ರಾಪುರ ಮಠದಿಂದ ಮಹತ್ವದ ಮಾಹಿತಿ ಇಲ್ಲಿದೆ.

RELATED ARTICLES  ಫ್ಲೈ ಓವರ್ ಕೆಳಭಾಗದಲ್ಲಿ ಕುಳಿತ ಯುವತಿ : ಕೆಲಕಾಲ ಆತಂಕದ ವಾತಾವರಣ

ಗಾಯಾಳುವನ್ನ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಸತ್ವಾಧಾರ ನ್ಯೂಸ್ ನಲ್ಲಿ Special ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.