ಕುಮಟಾ : ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರ, ಸರಸ್ವತಿ ವಿದ್ಯಾ ಕೇಂದ್ರ, ಸಿ.ವಿ.ಎಸ್.ಕೆ ಪ್ರೌಢಶಾಲೆ, ಸರಸ್ವತಿ ಪಿಯು ಕಾಲೇಜ್ ಇವರುಗಳ ಸಹಯೋಗದಲ್ಲಿ ಅಂಗ ಸಂಸ್ಥೆಗಳ ಎಲ್ಲಾ ಮಾತ್ರ ಮಂಡಳಿಯ ಪೂರ್ಣ ಪ್ರಮಾಣದ ಸಂಯೋಜನೆಯೊಂದಿಗೆ ಸರಸ್ವತಿ ವಿದ್ಯಾ ಕೇಂದ್ರದ ಆವಾರದಲ್ಲಿ ನಡೆದ ದೀಪಾವಳಿ ಮೇಳ ಅಭೂತಪೂರ್ವ ಯಶಸ್ಸು ಕಂಡಿತು.
ಇದನ್ನೂ ಓದಿ – ಗ್ರಹಣ ವಿಚಾರ ಶ್ರೀರಾಮಚಂದ್ರಪುರ ಮಠದಿಂದ ಪ್ರಮುಖ ಮಾಹಿತಿ ಇಲ್ಲಿದೆ.
ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರ ಇದರ ಮುಖ್ಯೋಪಾಧ್ಯಾಯರಾದ ಶ್ರೀ ಎಂ.ಟಿ ಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಯಕ್ರಮ ಉದ್ಘಾಟಿಸಿದ ಅವರು, ಹಿಂದೊಮ್ಮೆ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಇಲ್ಲದಿದ್ದ ಕಾಲದಲ್ಲಿ ಶಿಕ್ಷಣಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ ಇದೀಗ ಅನೇಕ ಸಂಸ್ಥೆಗಳು ತಲೆಯೆತ್ತಿ ನಿಂತಿದ್ದು, ಸ್ಪರ್ಧಾತ್ಮಕ ಯುಗ ತೆರೆದುಕೊಳ್ಳುತ್ತಿದೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿಯೂ ಕೊಂಕಣ ಸಂಸ್ಥೆ ವಿಭಿನ್ನವಾಗಿ ಕಾರ್ಯಕ್ರಮ ಸಂಘಟಿಸುವ ಮೂಲಕ ಸಂಸ್ಕಾರವನ್ನು ನೀಡುವ ಹೊಸ ಪ್ರಯತ್ನವನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಂಸ್ಥೆಯ ಹಿತೈಷಿಯಾಗಿ ಅನೇಕ ಬಾರಿ ಸಂಸ್ಥೆಯ ಚಟುವಟಿಕೆಗಳನ್ನು ಗಮನಿಸಿದಾಗ ಇಂತಹ ಒಂದು ಉತ್ತಮ ಸಂಸ್ಥೆ ನಮ್ಮಲ್ಲಿರುವುದು ಹೆಮ್ಮೆ ತರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ತಂದೆಗಿಂತ ತಾಯಿಯ ಪಾತ್ರ ಬಹಳ ಮಹತ್ವದ್ದು. ಮಾತ್ರಮಂಡಳಿಯವರನ್ನು ಸೇರಿಸಿ ಇಂತಹ ಸಂಸ್ಕಾರಯುತ ಕಾರ್ಯಕ್ರಮ ಸಂಘಟಿಸಿರುವುದು ಮುಂದಿನ ಪೀಳಿಗೆಗೆ ಹೊಸ ಹೆಜ್ಜೆಯಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ – ಉತ್ತರ ಕನ್ನಡದ ಜಿಲ್ಲಾ ಪ್ರತಿನಿಧಿಯಾಗಿ ಕೂಜಳ್ಳಿ ಶಾಲಾ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆ
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು, ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಬೇಕು ಎಂಬ ಮಹತ್ತರ ಉದ್ದೇಶದೊಂದಿಗೆ ದೀಪಾವಳಿ ಮೇಳ ಸಂಯೋಜನೆಗೊಂಡಿದೆ. ಮಾತ್ರ ಮಂಡಳಿ ಅವರೇ ಸಂಪೂರ್ಣವಾಗಿ ತೊಡಗಿಕೊಂಡು ಇಂತಹ ಕಾರ್ಯಕ್ರಮವನ್ನು ಸಂಘಟಿಸಿರುವುದು ಸಂಸ್ಥೆಯ ಶಕ್ತಿಯನ್ನು ಹೆಚ್ಚಿಸಿದೆ ಎಂದರು.
ವಿ. ರಮೇಶ ವರ್ಧನ್ ಅವರು ದೀಪಾವಳಿ ಸಂದೇಶವನ್ನು ನೀಡಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಹಬ್ಬದ ಆಚರಣೆಯ ಬಗ್ಗೆ ವಿವರಣೆ ನೀಡಿದರು. ಸಂಸ್ಕೃತ ಹಾಗೂ ವೇದಗಳ ಉಲ್ಲೇಖವನ್ನು ಉಲ್ಲೇಖಿಸಿ ದೀಪಾವಳಿ ಹಬ್ಬ ನರಕ ಚತುರ್ದಶಿ ಬಲಿಪಾಡ್ಯಮಿಯ ಆಚರಣೆಗಳನ್ನು ಮನಮುಟ್ಟುವಂತೆ ಸಭೆಗೆ ತಿಳಿಸಿಕೊಟ್ಟರು.
ದೀಪಾವಳಿ ಸಂಪ್ರದಾಯದ ಕುರಿತಾದ ಮಾತೆಯರಿಗೆ ದೀಪಾವಳಿ ಸಾಂಪ್ರದಾಯಿಕ ವಸ್ತುಗಳನ್ನು ಬಳಸಿ ಆರತಿ ತಟ್ಟೆ ಅಲಂಕಾರ, ತೋರಣ ತಯಾರಿ ಹಾಗೂ ರಂಗವಲ್ಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇನೆಯಿಂದ ನಿವೃತ್ತರಾದ ಎಂ.ಆರ್ ಗಿರೀಶ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗೋ ಸಾಕಾಣಿಕೆ ಮಾಡುವ ಪಾಲಕರಿಗೆ ಗೌರವ ಸಲ್ಲಿಸಲಾಯಿತು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ವಿಠಲ ಆರ್ ನಾಯಕ ಅಧ್ಯಕ್ಷತೆ ವಹಿಸಿದ್ದರು. ಮಾತೃ ಮಂಡಳಿಯ ಅಧ್ಯಕ್ಷರಾದ ಶೋಭಾ ಭಂಡಾರಿ ಸರ್ವರನ್ನು ಸ್ವಾಗತಿಸಿದರು. ಗಾಯತ್ರಿ ಪ್ರಭು ಪರಿಚಯಿಸಿದರು. ಸಂಸ್ಥೆಯ ಜಂಟೀ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ತರಾದ ರಮೇಶ ಪ್ರಭು, ಡಿ.ಡಿ ಕಾಮತ್, ಡಾ. ವೆಂಕಟೇಶ ಶಾನಭಾಗ,ಅನಂತ ಶಾಮಭಾಗ, ಅಶೋಕ ಪ್ರಭು, ಗಜಾನನ ಕಿಣಿ, ರಾಮಕೃಷ್ಣ ಗೋಳಿ ಹಾಗೂ ಮಾತೃಮಂಡಳಿಯ ಅಧ್ಯಕ್ಷೆ ಜಯಲಕ್ಷ್ಮಿ ಭಟ್ಟ, ಟ್ರಸ್ಟ್ ನ ಅಂಗಸಂಸ್ಥೆಗಳ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು,ಸಲಹೆಗಾರರು ಹಾಗೂ ಮಾತೃಮಂಡಳಿಯ ಇತರ ಸದಸ್ಯರು ಹಾಜರಿದ್ದರು. ಮಾತೆಯರು ಹಾಗೂ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನ ಮೆಚ್ಚುಗೆ ಪಡೆಯಿತು. ಶಿಕ್ಷಕ ಗಣೇಶ ಜೋಶಿ, ಚಿದಾನಂದ ಭಂಡಾರಿ, ಗೌರೀಶ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಗಮನಸೆಳೆದ ಮಾರಾಟ ಮಳಿಗೆಗಳು.
ಮಾತೆಯರು ಹಾಗೂ ಮಕ್ಕಳಿಂದ ಮಾರಾಟ ಮಳಿಗೆಗಳು ಜನ ಜಂಗುಳಿಯ ನಡುವೆ ಸಂಪನ್ನಗೊಂಡಿತು. ಖರ್ಜೂರದ ಉಂಡೆ, ಬಾದಾಮಿ ಪುರಿ, ಹಲ್ವಾ, ಮಣ್ಣಿಗೆ, ಕೊಟ್ಟೆ ರೊಟ್ಟಿ, ಕಡಬು, ಶ್ರೀಖಂಡ, ಬರ್ಫಿ, ಹೋಳಿಗೆ, ಬೋಂಡಾ, ಬಜ್ಜಿ, ಗಿರ್ಮಿಟ್, ಪಲಾವ್ ಹಾಗೂ ಇತರ ತಿನಿಸುಗಳ ಖರೀದಿಗೆ ಜನರು ಮುಗಿಬಿದ್ದರು.
ನರಕಾಸುರ ವಧೆ.
ದೀಪಾವಳಿ ಮೇಳದ ವಿಶೇಷ ಎಂಬಂತೆ, ನರಕಾಸುರ ದಹನ ಕಾರ್ಯಕ್ರಮ ಜರುಗಿತು. ದೈತ್ಯಾಕಾರದ ನರಕಾಸುರನ ಪ್ರತಿಕೃತಿ ನಿರ್ಮಿಸಿ ಕಾರ್ಯಕ್ರಮದ ಕೊನೆಯಲ್ಲಿ ದಹನ ಮಾಡಲಾಯಿತು.