ಸೆಂಟರ್‌ ಫಾರ್‌ ಡೆವಲಪ್ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ (ಸಿಡಿಎಸಿ)ಯಲ್ಲಿ 530 ಪ್ರಾಜೆಕ್ಟ್ ಇಂಜಿನಿಯರ್‌, ಪ್ರಾಜೆಕ್ಟ್ ಅಸೋಸೊಯೇಟ್ಸ್‌ ಸಹಿತ ವಿವಿಧ ಪ್ರಮುಖ ಹುದ್ದೆಗಳಿದ್ದು, ಇವುಗಳಿಗೆ ನೇಮಕಾತಿ ನಡೆಸುವ ಸಲುವಾಗಿ ಆಸಕ್ತರಾಗಿರುವ ಹಾಗೂ ಅರ್ಹರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಸದರಿ ಹುದ್ದೆಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಬಿ . ಇ , ಎಂ . ಟೆಕ್ ‌ ಹಾಗೂ ಪಿಎಚ್ ‌ ಡಿ ಪದವಿ ವಿದ್ಯಾರ್ಹತೆಯ್ನು ಅಭ್ಯರ್ಥಿಯು ಹೊಂದಿರಬೇಕಿದೆ.

RELATED ARTICLES  ಬೆಂಗಳೂರಿನಲ್ಲಿ ಒಪೋ (oppo) ಟೈಮ್ಸ್ ಫ್ರೆಶ್ ಫೇಸ್ 2017 ರ ಹತ್ತನೇ ಅಡಿಶನ್

ಪ್ರಾಜೆಕ್ಟ್ ಇಂಜಿನಿಯರ್‌ ಹುದ್ದೆ 250 ಇದ್ದು, ಸೀನಿಯರ್‌ ಪ್ರಾಜೆಕ್ಟ್ ಇಂಜಿನಿಯರ್‌ ಹುದ್ದೆ 200 ಹಾಗೂ ಪ್ರಾಜೆಕ್ಟ್ ಮ್ಯಾನೇಜರ್‌ ಹುದ್ದೆ 50 ಇದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಗರಿಷ್ಠ ಎಂದರೆ 35 ವರ್ಷದೊಳಗಿರಬೇಕಿದ್ದು, ಸರ್ಕಾರಿ ನಿಯಮಾನುಸಾರ ವಯೋ ಸಡಿಲಿಕೆ ಅನ್ವಯವಾಗಲಿದೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಯನ್ನು ಇ-ಮೇಲ್‌ ಮೂಲಕ ಸಂಪರ್ಕಿಸಲಾಗುತ್ತದೆ.

ಪ್ರಾಜೆಕ್ಟ್ ಅಸೋಸಿಯೇಟ್ಸ್‌ಗೆ ವಾರ್ಷಿಕವಾಗಿ 3.6 ಲಕ್ಷರು. ಇಂದ 5.4 ಲಕ್ಷರು. ವರೆಗೆ, ಪ್ರಾಜೆಕ್ಟ್ ಮ್ಯಾನೇಜರ್ ಗೆ 12.63 ಲಕ್ಷರು. ಇಂದ 22.09 ಲಕ್ಷರು. ವರೆಗೆ, ಸೀನಿಯರ್‌ ಪ್ರಾಜೆಕ್ಟ್ ಇಂಜಿನಿಯರ್‌ಗೆ 8.49 ಲಕ್ಷರು. ಇಂದ 14 ಲಕ್ಷರು. ವರೆಗೆನೀಡಲಾಗುತ್ತದೆ. ಅರ್ಜಿಸಲ್ಲಿಕೆಗೆ ಅ.29ರಂದು ಕೊನೆಯದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ತಾಣ https://www.cdac.in/ ಗೆಭೇಟಿ ನೀಡಬಹುದು.

RELATED ARTICLES  ಎಸ್​ಎಸ್​​ಎಲ್​ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ವೇಳಾಪಟ್ಟಿ

ಇನ್ನಿತರ ಎಲ್ಲಾ ಉದ್ಯೋಗ ಹಾಗೂ ಇತರ ಪ್ರಮುಖ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.