ಮುಂಬೈ: ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸಪ್ ಸರ್ವರ್ ನಲ್ಲಿ ಸಮಸ್ಯೆ ತಲೆದೋರಿದೆ. ಹೀಗಾಗಿ ವಿಶ್ವದಾದ್ಯಂತ ವಾಟ್ಸಪ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಈ ಬಗ್ಗೆ ಇದುವರೆಗೂ ವಾಟ್ಸಪ್ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.

ವಿಶ್ವದಾದ್ಯಂತ ಮಧ್ಯಾಹ್ನ ಸುಮಾರು 12.30ರಿಂದ ವಾಟ್ಸಪ್ ಕಾರ್ಯ ನಿರ್ವಹಿಸುತ್ತಿಲ್ಲ. ವಾಟ್ಸಪ್ ನಲ್ಲಿ ಮೆಸೇಜ್ ಗಳು ಕಳುಹಿಸಲು ಸಾಧ್ಯವಾಗದ ಕಾರಣಕ್ಕೆ ತಾವು ಮೊಬೈಲ್ ರಿ ಸ್ಟಾರ್ಟ್ ಮಾಡಿರುವುದಾಗಿ ಹಲವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

RELATED ARTICLES  ಪ್ರತ್ಯೇಕ ಲಿಂಗಾಯಿತ ಧರ್ಮದ ಪ್ರಸ್ತಾವನೆಗೆ ಕೇಂದ್ರದಿಂದ ರೆಡ್ ಸಿಗ್ನಲ್.!?

ವಾಟ್ಸಪ್ ಸರ್ವರ್ ಡೌನ್ ಆಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಚಿತ್ರ ವಿಚಿತ್ರ ಮೀಮ್ ಗಳು ಓಡಾಡುತ್ತಿವೆ.

ಜನಪ್ರೀಯ ಮೆಸೆಂಜ್‌ರ್‌ಗಳಲ್ಲಿ ಒಂದಾದ ವಾಟ್ಸಾಪ್‌ ಸೇವೆಗಳು ಸುಮಾರು 12:30 ರಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಸಂದೇಶಗಳು ಸೆಂಡ್ ಆಗುತ್ತಿಲ್ಲ. ಅಲ್ಲದೆ, ಸಾವಿರಾರು ಜನರು ವಾಟ್ಸಾಪ್ ಕೆಲಸ ಮಾಡುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಪ್ರಪಂಚದಾದ್ಯಂತ ಅರ್ಧಗಂಟೆಯಿಂದ ವಾಟ್ಸಾಪ್ ಸೇವೆಗಳು ಸ್ಥಗಿತಗೊಂಡಿವೆ.

RELATED ARTICLES  ದಿನಾಂಕ 25/07/2019 ರ ದಿನ ಭವಿಷ್ಯ ಇಲ್ಲಿದೆ