ದೀಪಾವಳಿ ಆಚರಣೆಯ ನಡುವೆ 2022 ರ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಇಂದು ಜರುಗುತ್ತಿದ್ದು. ಈ ಸೂರ್ಯಗ್ರಹವನ್ನು ಖಂಡಗ್ರಾಸ ಸೂರ್ಯಗ್ರಹಣ ಎನ್ನಲಾಗುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಈ ಸೂರ್ಯಗ್ರಹಣವನ್ನು ಹಲವೆಡೆ ಕೇತು ಕಗ್ರಾಸ ಸೂರ್ಯಗ್ರಹಣವೆಂದೂ ಕರೆಯಲಾಗುತ್ತದೆ.
ಗ್ರಹಣದ Live ವೀಕ್ಷಿಸಿ.
ಕರ್ನಾಟಕದ ಬೆಂಗಳೂರು, ಉಡುಪಿ, ಉತ್ತರಕನ್ನಡ, ರಾಯಚೂರು ಸೇರಿದಂತೆ ಹಲವೆಡೆ ಇಂದು ಸೂರ್ಯಗ್ರಹಣ ಗೋಚರವಾಗುತ್ತದೆ.
ಇರಲಿ ಮುನ್ನೆಚ್ಚರಿಕೆ.
Live ವಿಡಿಯೋ ಇಲ್ಲಿದೆ.
ಗ್ರಹಣವನ್ನು ವೀಕ್ಷಿಸುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವುದು ಬಹಳ ಮುಖ್ಯ. ಸೂರ್ಯಗ್ರಹಣವನ್ನು ಬರಿ ಕಣ್ಣುಗಳಿಂದ ನೋಡಬಾರದು. ಬರಿ ಕಣ್ಣಿನಿಂದ ಸೂರ್ಯ ಗ್ರಹಣ ವೀಕ್ಷಿಸಿದರೆ ಕಣ್ಣುಗಳಿಗೆ ಹಾನಿಯಾಗುತ್ತದೆ. ಸೂರ್ಯಗ್ರಹಣವನ್ನು ವೀಕ್ಷಿಸಲು ಅನೇಕ ಜನರು ದೂರದರ್ಶಕಗಳು ಮತ್ತು ಸನ್ ಗ್ಲಾಸ್ ಗಳನ್ನೂ ಬಳಸುತ್ತಾರೆ. ಆದರೆ ಅವುಗಳನ್ನು ಕೂಡಾ ಬಳಸುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಗ್ರಹಣವನ್ನು ವೀಕ್ಷಿಸಲು ವಿಶೇಷ ಸೋಲಾರ್ ಫಿಲ್ಟರ್ ಹೊಂದಿರುವ ಕನ್ನಡಕವನ್ನು ಮಾತ್ರ ಬಳಸಬೇಕು.