ಕಾರವಾರ : ಮುದ್ದೆಬಿಹಾಳ ಶಾಸಕರು ಕನ್ನಡಪ್ರಭ ವರದಿಗಾರರಿಗೆ ಬೇದರಿಕೆ ಹಾಕಿರುವುದನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮಂಗಳವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುದ್ದೆಬಿಹಾಳ ತಾಲೂಕಿನ ವರದಿಗಾರ ನಾರಾಯಣ ಮಾಯಾಚಾರಿ ಎನ್ನುವವರು ಕೃಷ್ಣಾ ತೀರದಲ್ಲಿ ವಿವಿಧ ಕಾಮಗಾರಿಗಳಿಗೆ ಮಂಜೂರಾದ 19 ಕೋಟಿ ರು. ಯೋಜನೆಯ ಕುರಿತು ರಸ್ತೆ ಅನುದಾನ ಬೇರೆಡೆ ವರ್ಗಾವಣೆಗೆ ಖಂಡನೆ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದಕ್ಕೆ ಶಾಸಕ ಎ.ಎಸ್.ಪಾಟೀಲ್, ನಡಹಳ್ಳಿ ವರದಿಗಾರ ನಾರಾಯಣ, ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ.

RELATED ARTICLES  ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಸ್ವರ್ಣವಲ್ಲೀ ಶ್ರೀ

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗವನ್ನು ಈ ರೀತಿ ಧಮನ ಮಾಡಲು ಹೊರಟಿರುವ ಇಂತಹ ಶಾಸಕರ ರಾಜಿನಾಮೆಯನ್ನು ತಕ್ಷಣ ಪಡೆದು, ಅವರ ಮೇಲೆ ಪ್ರಕರಣ ದಾಖಲಿಸಬೇಕು. ನಿರ್ಭಿತ ಸುದ್ದಿ ಮಾಡುವ ಪತ್ರಕರ್ತರನ್ನು ಈ ರೀತಿ ಅವ್ಯಾಚ ಶಬ್ದಗಳಿಂದ ನಿಂದಿಸಿ, ಅವಾಚ್ಯ ಪ್ರಜಾಪ್ರಭಹುತ್ವದ ಮೌಲ್ಯವನ್ನು ಹಾಳುಗೆಡವುವ ಇಂತಹ ಜನಪ್ರತಿನಿಧಿಗಳು ತಮ್ಮ ಘನತೆಗೆ ತಕ್ಕ ಮಾತನಾಡುವುದು ಉತ್ತಮ. ಇದು ಖಂಡನೀಯವಾಗಿದೆ. ಗೌರವಾನ್ವಿತ ರಾಜ್ಯಪಾಲರು ತಕ್ಷಣ ಮದ್ಯಪ್ರವೇಶಿಸಿ ಪತ್ರಕರ್ತರಿಗೆ ಜೀವ
ಬೇಧರಿಕೆ ಹಾಕಿದ ಶಾಸಕರನ್ನು ವಜಾ ಮಾಡಬೇಕು. ಅಲ್ಲದೆ ಶಾಸಕ ಎ.ಎಸ್.ಪಾಟೀಲ್ ಪಾಟೀಲ್, ನಡಹಳ್ಳಿ ಮೇಲೆ ತಕ್ಷಣ ಪ್ರಕರಣ ದಾಖಲಿಸಬೇಕು. ಈ ಪ್ರಕರಣದಲ್ಲಿ ಸೂಕ್ತ ನ್ಯಾಯ ಸಿಗದೇ ಇದ್ದರೆ ಹೋರಾಟ ಮಾಡುವುದು ಅನಿವಾರ್ಯವೆಂದು ಮನವಿಯಲ್ಲಿ ಹೇಳಲಾಗಿದೆ.

RELATED ARTICLES  ಒಂದೇ ಭಾವನೆಯಿಂದ ಬೆರೆತು ಬದುಕಬೇಕು : ಮಧುಕೇಶ್ವರ ನಾಯ್ಕ


ಈ ಸಂದರ್ಭದಲ್ಲಿ ಕಾ.ನಿ.ಪ.ದ್ವ ಸಂಘದ ಜಿಲ್ಲಾಧ್ಯಕ್ಷ ಸದಾನಂದ ದೇಶಭಂಡಾರಿ, ಪತ್ರಕರ್ತರಾದ ಉದಯ ಭಟ್, ನೀಲಕಂಠ ಬಳೇಗಾರ,ಕನ್ನಡಪ್ರಭ ವರದಿಗಾರ ಗುರು ಹೆಗಡೆ ಇನ್ನಿತರರು ಇದ್ದರು.