ಇತ್ತೀಚೆಗೆ ಅಂಕೋಲಾದ ಪ್ರಸಿದ್ಧ ದೇಗುಲ ಬಂಗಾರ ಮಹಾಮಾಯಿಯ ಬಳಿ ರಾತ್ರಿ 9.30 ರಿಂದ ನಾಡಿನ ಹೆಸರಾಂತ ರಂಗಕರ್ಮಿ ಚಲನಚಿತ್ರ ನಟ ನಿರ್ದೇಶಕ ಬಹುಭಾಷಾ ಕಲಾವಿದ , ಸಾಹಿತಿ,  ಕಾಸಗೋಡು ಚಿನ್ನಾ ಅವರ  ನಿರ್ದೇಶನ ಕೊಂಕಣಿ ನಾಟಕ  ಗಾಂಟಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಮೂಲ ಬಂಗಾಳಿಯ ಶಂಭುಮಿತ್ರ – ಅಮಿತ್ರಮೈತ್ರ ಅವರ “ಕಾಂಚನ ಗಂಗಾ ” ಎಂಬ ಹೆಸರಿನ ಈ ನಾಡಕವನ್ನು ಕನ್ನಡಕ್ಕೆ ಪ್ರೇಮಾಕಾರಂತ ಅವರು “ಕುರುಡು ಕಾಂಚಾಣ”ಎಂದು     ಭಾಷಾಂತರ ಮಾಡಿದ್ದು ಈ ನಾಟಕ ವನ್ನು ಕಾಸರಗೋಡು ಚಿನ್ನಾ ಅವರು ಕೊಂಕಣಿಯಲ್ಲಿ ಭಾಷಾಂತರ ಮಾಡಿ  ಗಾಂಟಿ ಎಂಬ ಹೆಸರನ್ನು ಇರಿಸಿದ್ದಾರೆ.

ಗಾಂಟಿ ಎಂದರೆ ಕೊಂಕಣಿಯಲ್ಲಿ ಗಂಟು( ಧನ ಅಥವಾ ಸಂಪತ್ತು) ಎಂದು ಅರ್ಥ

ನಾಟಕದ ಮೂಲ ಸತ್ವ ವೆಂದರೆ ಹಣ ಎನ್ನುವುದು ಎಂಥವನನ್ನೂ ಏನೇನೇನೂ ಮಾಡಿಸ ಬಲ್ಲದು ಆದರೆ ನಿಜವಾದ ಗಂಟು ಎಂದರೆ ಸಂಪತ್ತಲ್ಲ, ಪ್ರೀತಿ,ವಿಶ್ವಾಸ,ನಂಬಿಕೆಯೇ ಗಂಟು ಅದನ್ನು ಇಂದು ಉಳಿಸಿ ಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ ಎಂಬ  ಈ ಕಥೆಯ ನಾಯಕ ಶಿನ್ನ  ಆತ ಇಬ್ಬರು ಗಂಡುಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ಉಳ್ಳ ದಂಪತಿಗಳ ಕುಟುಂಬದ ಮನೆಯ ಕೆಲಸದ ಆಳು ಇವನ ಜೊತೆ ಸೇವಂತಿ ಎಂಬ ಕೆಲಸದವಳು ಹೀಗೆ ಏಳು ಜನರಿರುವ ಮನೆಯಲ್ಲಿ ತನ್ನ ಬೋಳೇತನದಿಂದ ಎಡವಟ್ಟು ಮಾಡಿಕೊಂಡು ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗುವ ಶಿನ್ನ ನನ್ನು ಮನೆಯಿಂದು ಹೊರಹಾಕುವ ವೇಳೆ ಆಕಸ್ಮಿಕ ವಾಗಿ ಆತನಿಗೆ ಒಂದು ಕೋಟಿ ಲಾಟರಿ ತಾಗಿದೆ ಎಂಬ ವಿಷಯ ತಿಳಿದು ಇದ್ದಕ್ಕಿದ್ದಂತೆ ಎಲ್ಲರೂ ತಕ್ಷಣ ಬದಲಾಗಿ ಶಿನ್ನನಿಗೆ ರಾಜೋಪಚಾರ ನೀಡುತ್ತಾರೆ.ಶಿನ್ನನಿಗೆ ದೊರೆವ ಹಣದಿಂದ ತನ್ನ ಮನೆಯನ್ನೇ ಆತನಿಗೆ ಲೀಸ್ ಗೆ ಕೊಟ್ಟು ಅವನ ಹಣ ಲಪಟಾಯಿಸುವ ದುರ್ಬುದ್ಧಿ ಯಜಮಾನನಿಗಾದರೆ ಅವನ ಹಣ ಬಳಸಿ ಸಿನೆಮಾ ಮಾಡಿ ಹಣ ಗಳಿಸುವ ದುರಾಸೆ ಒಬ್ಬ ಮಗನಿಗೆ ಇನ್ನೊಬ್ಬನಂತೂ ವಿದೇಶ ಯಾತ್ರೆಯ ಮೋಹಕ್ಕೆ ಒಳಗಾಗಿ ಶಿನ್ನನ ಗಂಟಿನ ಮೇಲೆ ಕಣ್ಣಿಟ್ಟರೆ ಮನೆಯ ಯಜಮಾನಿ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮಗಳು ಕವನಾಳನ್ನು ಶಿನ್ನನಿಗೇ ನೀಡಿ ಗಂಟು ಮನೆಯಲ್ಲಿಯೇ ಇರುವ ಕುತಂತ್ರ ಹೆಣೆಯುತ್ತಾಳೆ ಈ ಮಧ್ಯೆ ಸೇವಂತಿಯು ಮಾತ್ರ ಚಿನ್ನನ ಕುರಿತು ಸದ್ಭಾವನೆಯ ನಿರ್ಮಲ ಪ್ರೀತಿಯನ್ನು ಹೊಂದಿ ಮುಂದೆ ತಿರಸ್ಕಾರಕ್ಕೆ ಒಳಗಾಗುತ್ತಾಳೆ .ಈ ಅನಿರೀಕ್ಷಿತ ಗಂಟು ಮುಗ್ಧ ಶಿನ್ನನ ಮನಸ್ಸನ್ನೂ ಹಾಳುಮಾಡಿ ಆತನಲ್ಲಿಯೂ ಅಹಂಕಾರ ಮೊಳೆವಂತೆ ಮಾಡುತ್ತದೆ.

RELATED ARTICLES  ಮುಂಡಗೋಡದಲ್ಲಿ ಸಿಡಿಲು ಬಿದ್ದ ಪರಿಣಾಮ ಧ್ವಂಸವಾಗಿರುವ ಮನೆ.


ಇದೇ ವೇಳೆ ಅದು ಲಾಟರಿ ಶಿನ್ನನಿಗೆ ತಾಗಿದ್ದಲ್ಲ ತಪ್ಪು ಗ್ರಹಿಕೆ ಎಂದು ತಿಳಿದು ಬಂದಾಗ ಮನೆಯವರು ದಂಗಾಗುತ್ತಾರೆ.ಅದುತನಕ ರಾಜ ಮರ್ಯಾದೆ ನೀಡಿದ ಶಿನ್ನನನ್ನು ಮನ ಬಂದಂತೆ ಥಳಿಸಿ ಹೊರಹಾಕುವಾಗ  ಶಿನ್ನನ ಹಿತೈಷಿ ತಾನು ಬೇಕು ಅಂತಲೇ ಸುಳ್ಳು ಹೇಳಿ ನಿಮ್ಮನ್ನು ಪರೀಕ್ಷೆ ಮಾಡಿದೆ ನಿಜವಾಗಿಯೂ ಶಿನ್ನ ಈಗ ಕೋಟ್ಯಾಧಿ ಪತಿ ಎಂದಾಗ ಮತ್ತೆ ಮನೆ ಮಂದಿ ಪ್ರೀತಿಯ ನಾಟಕ ಆಡಿದರೂ ಶಿನ್ನ ಅವರನ್ನು ನಂಬದೇ ಅವರಿಂದ ದೂರ ಹೋಗಿ ನಿಜವಾದ ಪ್ರೀತಿಯ ಗಂಟಾದ ಸೇವಂತಿಯ ಬಾಳಲ್ಲಿ ಜೊತೆಯಾಗುತ್ತಾನೆ.

RELATED ARTICLES  12 ಅಡಿಯ ಕಾಳಿಂಗ ಸರ್ಪ ಕಂಡು ಬೆಚ್ಚಿದ ಜನ

ಮಂಗಳೂರಿನ ಬಿಂಬ ಕಲಾ ತಂಡ ಸಾದರ ಪಡಿಸಿದ ಈ ನಾಟಕದ ಮುಖ್ಯ ಪಾತ್ರಧಾರಿ ಶಿನ್ನ ಪಾತ್ರದಲ್ಲಿ ಕಾಸರಗೋಡು ಚಿನ್ನಾ, ವಿಶ್ವಮಾಮ್ ಪಾತ್ರದಲ್ಲಿ ಮುರಳೀಧರ ಕಾಮತ್,ಸುಶೀಲ ಮಾಯಿ ಪಾತ್ರವನ್ನು ಪುಷ್ಪಲತಾ ಭಟ್,ಆನಂದು ಪಾತ್ರವನ್ನು ಶಶಿಭೂಷಣ ಕಿಣಿ ಮಣಿಪಾಲ್,ಶಂಕ್ರ ಪಾತ್ರವನ್ನು ಡಾಕ್ಟರ್ ಸುದೀಶ ರಾವ್, ಕವನಾ ಪಾತ್ರವನ್ನು ಕುಮಾರಿ ಚೈತ್ರಾ , ಶೇಂವ್ತಿ ಪಾತ್ರವನ್ನು ಸುಮನಾ ಮಂಗಳೂರು, ಗಿರಿಮಾಮ್ ಪಾತ್ರವನ್ನು ಪ್ರಕಾಶ ನಾಯಕ, ಭಾಸ್ಕರ್ ಪಾತ್ರದಲ್ಲಿ ಅಶ್ವಿನ್ ಚೇರ್ಕಲ , ವಿಠೋಬ ಪಾತ್ರವನ್ನು ಗಜಾನನ ಶೈಣೈ ಅಭಿನಯಿಸಿ ತಮ್ಮ ಪ್ರೌಢವಾದ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ.

ನಾಟಕಕ್ಜೆ ಸಂಗೀತವನ್ನು ಮುರಳೀಧರ ಕಾಮತ್ ಹಾಗೂ ಅನಿಲ್ ನಾವೂರ್ ಒದಗಿಸಿದ್ದು ಬೆಳಕನ್ನು ಈಶ್ವರ್, ರಂಗಸಜ್ಜಿಕೆಯನ್ನು ಪೊರ್ಲು ಆರ್ಟ ,ಪ್ರಸಾದನ ವ್ಯವಸ್ಥೆಯನ್ನು ಪ್ರಕಾಶ ನಾಯಕ ವಸ್ತ್ರವಿನ್ಯಾಸವನ್ನು ವೆಂಕಟೇಶ್ ಶೇಟ್ ರಂಗಪರಿಕರವನ್ನು ಸುಬ್ರಹ್ಮಣ್ಯ ಪ್ರಭು ನಿರ್ವಹಿಸಿದ್ದರು.