ಶಿರಸಿ: ಗ್ರಾಮೀಣ ಠಾಣಾ ವ್ಯಾಪ್ತಿಯ ಪುಟ್ಟನ ಮನೆಯ ಬೆಟ್ಟದಲ್ಲಿ ಇಸ್ಪೀಟ್ ಜುಗರಾಟ ಆಡುತ್ತಿದ್ದವರ ಮೇಲೆ ಜಿಲ್ಲಾ ವಿಶೇಷ ವಿಭಾಗ ಹಾಗೂ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲಾ ವಿಶೇಷ ವಿಭಾಗದ ಪಿಎಸ್‌ಐ ಪ್ರೇಮನಗೌಡ ಪಾಟೀಲ್ ಹಾಗೂ ಗ್ರಾಮೀಣ ಠಾಣಾ ಪಿಎಸ್‌ಐ ಪ್ರತಾಪ್ ಇವರುಗಳು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ, ಒಟ್ಟು 7 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಲ್ವರು ಓಡಿ ಪರಾರಿಯಾಗಿದ್ದಾರೆ.
ಅಂದರ್ ಬಾಹರ್ ಆಟಕ್ಕೆ ಬಳಸಿದ್ದ 1,50,200 ನಗದು, ಒಂದು ಮಾರುತಿ ಕಂಪನಿಯ ಸ್ವಿಫ್ಟ್ ಕಾರ್, ಮಹಿಂದ್ರಾ ಕಂಪನಿಯ ಬೊಲೆರೋವನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಎಸ್., ಡಿವೈಎಸ್‌ಪಿ ರವಿ ಡಿ.ನಾಯ್ಕ್, ಸಿಪಿಐ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಸಿಬ್ಬಂದಿ ರಾಘವೇಂದ್ರ ನಾಯ್ಕ್, ಸಂತೋಷ್, ಭಗವಾನ್, ಪ್ರದೀಪ್, ಮಾದೇವ, ಗಣಪತಿ, ಅರುಣ ಪಾಲ್ಗೊಂಡಿದ್ದರು.