ಕುಮಟಾ : ತಾಲೂಕಿನ ಅಳ್ವೆಕೋಡಿಯ ಮಾರುತಿ ಸುಜುಕಿ ಶೋ ರೂಮ್ ಸಮೀಪ ಹೆದ್ದಾರಿ ದಾಟುತ್ತಿದ್ದ ಪಾದಾಚಾರಿಗೆ ಬೋಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದ್ದು, ತಾಲೂಕಿನ ಅಳ್ವೆಕೋಡಿ ನಿವಾಸಿ ಜಗದೀಶ ಪದ್ಮನಾಭ ನಾಯ್ಕ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.

RELATED ARTICLES  ನೀರಿನಲ್ಲಿ ತೇಲುತ್ತಿದ್ದ ಅಪರಿಚಿತ ಶವ : ಮುರುಡೇಶ್ವರದಲ್ಲಿ ಅಂತ್ಯ ಸಂಸ್ಕಾರ.

ಈತನು ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನಿಂದ ಗೋವಾ ಕಡೆ ತೆರಳುತ್ತಿದ್ದ ಬೋಲೆರೋ ಪಿಕ್ ಅಫ್ ವಾಹನ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಪಾದಾಚಾರಿ ಜಗದೀಶ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅಲ್ಲದೇ ಅಪಘಾತ ಪಡಿಸಿದ ಬೋಲೆರೋ ಪಿಕ್ ಅಫ್ ವಾಹನ ಚಾಲಕ ಮಾಹನವನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದ್ದ. ಇದನ್ನು ಗಮನಿಸಿದ ಸ್ಥಳೀಯ ಯುವಕರ ಮಾಹಿತಿ ಮೆರೆಗೆ ಕುಮಟಾ ಪೊಲೀಸರು ಹಿರೇಗುತ್ತಿ ಚಕ್‌ಪೋಸ್ಟ್ ಬಳಿ ವಾಹನವನ್ನು ವಶಕ್ಕೆ ಪಡೆದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

RELATED ARTICLES  ದಿ. ಕಾಶೀನಾಥ ನಾಯಕರಿಗೆ ಶ್ರದ್ಧಾಂಜಲಿ : ಸಂದಿತು ನುಡಿ ನಮನ