ಕುಮಟಾ ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ನಡೆಸಲಾಯಿತು. ಕಡಲನ್ನು ಅವಲಂಬಿಸಿ ಬದುಕು ಸಾಗಿಸುತ್ತಿರುವ ಸಮುದಾಯದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಕಡಲ ತಡಿಯಲ್ಲಿ ನಡೆಸಿದ್ದು ಹೆಚ್ಚು ಅರ್ಥಪೂರ್ಣವಾಗಿತ್ತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಕೆ ಶೆಟ್ಟಿಯವರು ದೋಣಿ ಏರಿ ನಾಡಗೀತೆಗೆ ಧ್ವನಿ ಸೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಕನ್ನಡ ಉಳಿಯಬೇಕಾದರೆ ನಾವು ಅದನ್ನು ಬಳಸಬೇಕು. ನಾಡು-ನುಡಿಯ ಅಭಿಮಾನ ನಮ್ಮೆಲ್ಲರಿಗಿರಲಿ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ದೇಶ-ಭಾಷೆಯ ಬಗ್ಗೆ ಅಭಿಮಾನ ಮೂಡಲು ಕಾರಣವಾಗುತ್ತವೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ವೈಶಿಷ್ಟ್ಯಪೂರ್ಣವಾದ ಸಂಘಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  " ಕೋವಿಡ್ 19, ಮಂಗನಕಾಯಿಲೆ ಹಾಗೂ ಕುಡಿಯುವ ನೀರಿನ ಸಂಬಂಧಿಸಿದಂತೆ ಪ್ರಗತಿಪರಿಶೀಲನಾ ಸಭೆ "

ಶಾಲಾ ವಿದ್ಯಾರ್ಥಿಗಳು ವಿಶೇಷ ವೇಷಭೂಷಣಗಳಲ್ಲಿ ನೃತ್ಯದೊಂದಿಗೆ ಪ್ರಸ್ತುತ ಪಡಿಸಿದ ಕನ್ನಡಗೀತೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಶಾಸಕರು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಹಣ್ಣು ವಿತರಿಸಿದರು. ಗ್ರಾಮ ಪಂಚಾಯತ್ ಹೊಲನಗದ್ದೆಯ ಉಪಾಧ್ಯಕ್ಷರು, ಸದಸ್ಯರು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಚಂದ್ರಹಾಸ ನಾಯ್ಕ , ಉಪಾಧ್ಯಕ್ಷರಾದ ಶಾಂತಿ ಮುಕ್ರಿ ಹಾಗೂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿ.ಆರ್.ಪಿ. ಪ್ರದೀಪ ನಾಯಕ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಗಳು, ಊರ ನಾಗರಿಕರು ಉಪಸ್ಥಿತರಿದ್ದರು. ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES  ಅಪಘಾತದಲ್ಲಿ ಮಹಿಳೆ ಸ್ಥಳದಲ್ಲಿಯೇ ಸಾವು.