ಶಿರಸಿ : ಎಲ್ಲರ ಮೆಚ್ಚಿನ ಚಿತ್ರನಟ ಹಾಗೂ ಸಾಮಾಜಿಕ ಕಳಕಳಿಯ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳುವಾವರ ದಾರಿಯಲ್ಲಿಯೇ ಮುನ್ನಡೆದು ಇತರರಿಗೆ ಮಾದರಿಯಾಗುವ ಕಾರ್ಯ ಮಾಡಿದ್ದಾರೆ. ಕಷ್ಟದಲ್ಲಿದ್ದ ದಿನಗೂಲಿ ನೌಕರನ ಕಷ್ಟಕ್ಕೆ ನೆರವಾಗುವ ಮೂಲಕ ಒಂದೊಳ್ಳೆ ಕಾರ್ಯವನ್ನು ಮಾಟಿರುವ ಶಿರಸಿಯ ಅಪ್ಪು ಅಭಿಮಾನಿಗಳು ಇದೀಗ ಸಾರ್ಥಕ್ಯದ ಭಾವನೆ ವ್ಯಕ್ತಪಡಿಸಿದ್ದಾರೆ.
ಗಂಧದ ಗುಡಿ ಚಲನಚಿತ್ರ ವೀಕ್ಷಣೆಗಾಗಿ ಅಪ್ಪು ಅಭಿಮಾನಿಗಳು ಬಂದಿದ್ದ ಸಂದರ್ಭದಲ್ಲಿ ಅವರು ಬಂದ ಚಿತ್ರಮಂದಿರದ ದಿನಗೂಲಿ ನೌಕರನ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಪತ್ನಿಯ ಮೃತದೇಹ ತರಲು ದುಡ್ಡಿಲ್ಲದೆ ಪತಿ ಕಂಗಾಲಾಗಿದ್ದ ವಿಷಯ ತಿಳಿದಿದ್ದಾರೆ.
ಏನು ಮಾಡಬೇಕೆಂದು ತೋಚದೆ ತಲೆಮೇಲೆ ಕೈಹೊತ್ತು ಕುಳಿತಿದ್ದ ನೌಕರನಗಿದೆ ನೆರವಾಗುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ. ಆಸ್ಪತ್ರೆಯ ಬಿಲ್ 24 ಸಾವಿರ ಆಗಿದ್ದು, ಇದನ್ನು ಕಟ್ಟಿ ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಹಣವಿಲ್ಲದೆ ಪರದಾಡಿದ್ದ ಪತಿ. ವಿಷಯ ತಿಳಿದ ಶಿರಸಿಯ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಸ್ಪತ್ರೆಗೆ ತೆರಳಿ ಹಣ ಸಂದಾಯ ಮಾಡಿ ಮೃತದೇಹ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಂತೆ ಅವರ ಅಭಿಮಾನಿಗಳು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ.
ಚಿತ್ರಮಂದಿರದಲ್ಲಿ ದಿನಗೂಲಿ ನೌಕರನಾಗಿರುವ ವ್ಯಕ್ತಿಯ ಗರ್ಭಿಣಿ ಪತ್ನಿಯ ಮಗು ಜನಿಸುವ ಮೊದಲೇ ಕೊನೆಯುಸಿರೆಳೆದಿತ್ತು. ಮಗುವನ್ನು ಹೊರತೆಗೆದು ಮಹಿಳೆಗೆ ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಿಸದೆ ಮಹಿಳೆಯೂ ಮೃತಪಟ್ಟಿದ್ದಳು.