ಕುಮಟಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿದ್ಯಾ ರಾಮ ನಾಯ್ಕ ರವರು ಪದೋನ್ನತಿ ಹೊಂದಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಅಧೀಕ್ಷಕರಾಗಿ ನೇಮಕವಾಗಿರುವ ಪ್ರಯುಕ್ತ ಅವರಿಗೆ ಅಭಿಮಾನದ ಸನ್ಮಾನ ನೀಡಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ(ನಿ).ತೀರ್ಥಹಳ್ಳಿ ಇದರ ಕುಮಟಾ ಶಾಖೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕುಮಟಾ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರೂ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರೂ ಆದ ರವೀಂದ್ರ ಭಟ್ಟ ಸೂರಿ ಸನ್ಮಾನಿಸಿ ಮಾತನಾಡಿ ವಿದ್ಯಾ ರಾಮ ನಾಯ್ಕರವರು ಕಳಂಕ ರಹಿತ ಸೇವೆಯನ್ನು ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ, ಅಹಂಕಾರವಿಲ್ಲದವರನ್ನು ಜನರ ಅಭಿಮಾನ ಅಲಂಕರಿಸುತ್ತದೆ ಎಂಬ ಮಾತಿನಂತೆ ಸರಳ ಸಜ್ಜನಿಕೆಯ ಇವರಿಗೆ ನಾವು ಅಭಿಮಾನದಿಂದ ಸನ್ಮಾನಿಸಿದ್ದೇವೆ ಎಂದರು, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಮಂಜುನಾಥ ನಾಯ್ಕ, ಅಸಿಸ್ಟೆಂಟ್ ಕಮಿಷನರ್ ಕಚೇರಿಯ ಸಿಬ್ಬಂದಿ ಸಚಿನ್ ನಾಯ್ಕ, ಸಹಕಾರಿಯ ಶಾಖಾ ವ್ಯವಸ್ಥಾಪಕರಾದ ಗೀತಾ ಹೆಗಡೆ, ಸಹಾಯಕರಾದ ಶ್ರೀಯಾ ಸೋಡನ್ಕರ್ ಉಪಸ್ಥಿತರಿದ್ದರು.

RELATED ARTICLES  ಬಿಸಿಲ ಬೇಗೆ ತಣಿಸಿದ ಮಳೆರಾಯ : ಇನ್ನೂ ಎರಡು ದಿನ ಇರಲಿದೆ ವರುಣನ ಅಬ್ಬರ.