2022-23ನೇ ಸಾಲಿನ 10ನೇ ತರಗತಿಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಶನಿವಾರ ಬಿಡುಗಡೆಗೊಳಿಸಿದೆ. ಪ್ರಕಟಗೊಂಡಿರುವ SSLC ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಾರ ಏಪ್ರಿಲ್ 1ರಿಂದ 15ರ ವರೆಗೆ ಪರೀಕ್ಷೆ ನಡೆಯಲಿದೆ. ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 28ರ ವರೆಗೂ ಅವಕಾಶ ನೀಡಲಾಗಿದೆ.
ತಾತ್ಕಾಲಿಕ ವೇಳಾಪಟ್ಟಿಯ ವಿಷಯವಾರು ವಿವರ ಹೀಗಿದೆ
ಏಪ್ರಿಲ್ 1- ಪ್ರಥಮ ಭಾಷೆ ವಿಷಯ.
ಏಪ್ರಿಲ್ 4-ಗಣಿತ.
ಏಪ್ರಿಲ್-6 ದ್ವಿತೀಯ ಭಾಷೆ ವಿಷಯ.
ಏಪ್ರಿಲ್ 10- ವಿಜ್ಞಾನ.
ಏಪ್ರಿಲ್ 12- ತೃತೀಯ ಭಾಷೆ ವಿಷಯ.
ಏಪ್ರಿಲ್ 15- ಸಮಾಜ ವಿಜ್ಞಾನ.