ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊನ್ನಾವರ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ನೇತ್ರತ್ವದಲ್ಲಿ ಜನಪರ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಪಾದಯಾತ್ರೆಯು ಸೂರಜ್ ನಾಯ್ಕ ಸೋನಿ ಅಭಿಮಾನಿ ಬಳಗದ ಸದಸ್ಯರು ಹಾಗೂ ಇತರ ಮುಖಂಡರ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.

ಬೆಳಗ್ಗೆ ಹೊನ್ನಾವರದ ಶರಾವತಿ ಸರ್ಕಲ್ ನಿಂದ 9 ಘಂಟೆಗೆ ಪ್ರಾರಂಭಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಸಂಜೆ ಕುಮಟಾ ಗಿಬ್ ಸರ್ಕಲ್ ನಲ್ಲಿ ಪಾದಯಾತ್ರೆ ಸಂಪ್ನಗೊಂಡಿತು. ನಂತರ ಕುಮಟಾ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಅನುಷ್ಟಾನ ಗೊಳಿಸಬೇಕು,ಹಾಲಕ್ಕಿ ಒಕ್ಕಲಿಗ ಸಮಾಜಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು,ಮೀನುಗಾರರನ್ನು ಅಭಿವೃದ್ಧಿ ಹೆಸರಿನಲ್ಲಿ ಒಕ್ಕಲೆಬ್ಬಿಸಬಾರದು, ಮೀನುಗಾರರ ಅನುಕೂಲಕ್ಕಾಗಿ ಕುಮಟಾ,ಹೊನ್ನಾವರದಲ್ಲಿ ಮಿನಿ ಕೋಲ್ಡ್ ಸ್ಟೋರೇಜ್ ಒದಗಿಸಬೇಕು, ಅಘನಾಶಿನಿ, ಅಳ್ವೆಕೋಡಿಯಲ್ಲಿ ಬ್ರೇಕ್ ವಾಟರ್ ನಿರ್ಮಾಣ ಮಾಡಿ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕು, ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ನೆಡೆದ ರಾಜಕೀಯ ವ್ಯತ್ಯಂತರ ವಿರುದ್ಧ ಹಾಗೂ ಕುಟುಂಬಕ್ಕೆ ನ್ಯಾಯ ವದಗಿಸಬೇಕು, ಅರಣ್ಯಾತಿಕ್ರಮಣದಾರರನ್ನ ಒಕ್ಕಲೆಬ್ಬಿದಬಾರದು ಹೀಗೆ ಹಲವು ಕ್ಷೇತ್ರದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸೂರಜ್ ಸೋನಿ ಯವರು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು.

RELATED ARTICLES  ಯಶಸ್ವಿಯಾಗಿ ಸಂಪನ್ನವಾದ "ಭೀಷ್ಮ ವಿಜಯ" ತಾಳಮದ್ದಳೆ.

ಕುಮಟಾದ ಗಿಬ್ ಸರ್ಕಲ್ಲಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು, ಕನ್ನಡ ಬಾವುಟ ಹಾಗೂ ಸೂರಜ ನಾಯ್ಕ ಸೋನಿ ಅವರ ಬಾವುಟ ಹಿಡಿದು ಘೋಷಣೆಗಳನ್ನು ಕೂಗಿದರು. ಪಕ್ಷಭೇದ ಮರೆತು ಅನೇಕ ಜನ ಸಾರ್ವಜನಿಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಪಾದಯಾತ್ರೆಯನ್ನು ಯಶಸ್ವಿಯಾಗಿದ್ದರು.

ಪಾದಯಾತ್ರೆಯ ಸಂದರ್ಭದಲ್ಲಿ ಆಯಾ ಗ್ರಾಮದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಮನವಿಯನ್ನು ಸೂರಜ ನಾಯ್ಕ ಸೋನಿ ಸ್ವೀಕರಿಸಿದರು. ಡಾ.ಎನ್ ಆರ್ ನಾಯಕ ಪ್ರಾರಂಭದಲ್ಲಿ ಮಾತನಾಡಿ ಇಡೀ ದೇಶಕ್ಕೆ ಬೆಳಕು ಕೊಟ್ಟ ಜಿಲ್ಲೆ ನಮ್ಮದು ಆದರೆ ನಾವು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಯಿತು. ಡಾ. ಚಿತ್ತರಂಜನ್, ತಿಮ್ಮಪ್ಪ ನಾಯಕ ಇಂಥವರ ಕೊಲೆಯ ಹಿಂದಿನ ಕೈವಾಡ ಇನ್ನು ಬಯಲಾಗಿಲ್ಲ ಇದರ ಹಿಂದಿನ ಷಡ್ಯಂತ್ರ ಯಾರದ್ದು ಎನ್ನುವುದು ಬಯಲಾಗಲೇ ಇಲ್ಲ ಎಂಬುದು ದುರಂತದ ಸಂಗತಿ. ಆದರೆ ಈ ಎಲ್ಲ ಸಾವಿನ ಲಾಭವನ್ನು ಪಡೆದವರೇ ಯಾಕೆ ಇಂತಹ ಕೃತ್ಯ ನಡೆಸಿರಬಾರದು ಎನ್ನುವ ಯೋಚನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಗುಡುಗಿದರು. ಅರಣ್ಯ ಅಧಿಕ್ರಮಣದಾರರಿಗೆ ಅನ್ಯಾಯವಾಗುತ್ತಿದೆ, ಮೀನುಗಾರರನ್ನು ಅಭಿವೃದ್ಧಿ ಹೆಸರಿನಲ್ಲಿ ಒಕ್ಕಲೆಬ್ಬಿಸಬಾರದು, ಮೀನುಗಾರರ ಅನುಕೂಲಕ್ಕಾಗಿ ಕುಮಟಾ,ಹೊನ್ನಾವರದಲ್ಲಿ ಮಿನಿ ಕೋಲ್ಡ್ ಸ್ಟೋರೇಜ್ ಒದಗಿಸಬೇಕು, ಅಘನಾಶಿನಿ, ಅಳ್ವೆಕೋಡಿಯಲ್ಲಿ ಬ್ರೇಕ್ ವಾಟರ್ ನಿರ್ಮಾಣ ಮಾಡಿ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಂಡಿದ್ದು ಇದು ಜಾಗೃತಿಯ ಗಂಟೆ ಬಾರಿಸಲಿದೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಸೂರಜ ನಾಯ್ಕ ಸೋನಿ ತಿಳಿಸಿದರು.

RELATED ARTICLES  ಲಾಯನ್ಸ್ ಕ್ಲಬ್ ಕುಮಟಾದಿಂದ ಅಮೃತಧಾರಾ ಗೋಶಾಲೆ ಹೊಸಾಡದಲ್ಲಿ ಮೇವು ವಿತರಣೆ

ಮಹಿಳೆಯರು, ವೃದ್ಧರು, ಅಂಗವಿಕಲರು ಸಹ ಸೋನಿಯವರ ಜೊತೆ ಹೆಜ್ಜೆ ಹಾಕುವುದರ ಮೂಲಕ ಪಾದಯಾತ್ರೆ ಕಳೆ ಹೆಚ್ಚಿಸಿದರು. ಪರೇಶ್ ಮೆಸ್ತ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡು ಹೇಳಿಕೆ ಬದಲಾದಂತೆ ಇದೀಗ ಪುನಃ ತನಿಖೆಯ ನಾಟಕ ಮಾಡುತ್ತಿದ್ದಾರೆ, ಆಸ್ಪತ್ರೆಯ ವಿಚಾರದಲ್ಲಿಯೂ ಸರ್ಕಾರ ನಾಟಕ ಮಾಡುತ್ತಿದೆ ಇಂತಹ ಅನೇಕ ನಾಟಕಗಳನ್ನು ನೋಡಿ ನೋಡಿ ಬೇಸತ್ತಿದ್ದೇವೆ ಇಂತಹ ವಿಚಾರದಲ್ಲಿ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ ಎಂದರು.

ವೀಣಾ ಸೂರಜ‌ ನಾಯ್ಕ ಸೋನಿ, ಹೋರಾಟಗಾರ ರವೀಂದ್ರ ನಾಯ್ಕ, ಭಾಸ್ಕರ ಪಟಗಾರ ಹಾಗೂ ಇತರ ಪ್ರಮುಖರು ಪಾದಯಾತ್ರೆಯಲ್ಲಿ ಸೋನಿಯವರ ಜೊತೆಗೆ ಹೆಜ್ಜೆ ಹಾಕಿದರು.