ಶಿರಸಿ : ಅಡಿಕೆ ಹೆಕ್ಕಲು ತೋಟಕ್ಕೆ ಹೋದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿ ಗೋಣ್ಸರ ಗ್ರಾಮದಲ್ಲಿ ನಡೆದಿದೆ. ಶ್ರೀಪಾದ ಪರಮೇಶ್ವರ ಹೆಗಡೆ ಎಂಬಾತನೇ ಮೃತ ದುರ್ದೈವಿಯಾಗಿದ್ದು ಬೆಳಗಿನ ಸಮಯದಲ್ಲಿ ಅಡಿಕೆ ಹೆಕ್ಕಲು ತೋಟಕ್ಕೆ ಹೋದಾಗ ಕಾಲು ಜಾರಿ ನೀರಿನ ಬಾವಿಯಲ್ಲಿ ಬಿದ್ದು, ಮೇಲೇಳಲಾಗದೇ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ – ಸೂರಜ್ ನಾಯ್ಕ ಸೋನಿ ನೇತೃತ್ವದಲ್ಲಿ ಯಶಸ್ವಿಯಾದ ಜನಪರ ಯಾತ್ರೆ : ಸಹಸ್ರಾರು ಜನರು ಭಾಗವಹಿಸಿ ಸೋನಿ ಜೊತೆಗೆ ನಡಿಗೆ.
ವ್ಯಕ್ತಿ ಮನೆಗೆ ಬಾರದನ್ನು ಗಮನಿಸಿದ ಮನೆಯವರು ಆತನನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎನ್ನಲಾಗಿದ್ದು, ನಂತರದಲ್ಲಿ ಮಾಹಿತಿ ಅರಿತ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಸಹಕಾರದಿಂದ ಮುಂದಿನ ಪ್ರಕ್ರಿಯೆಗಳನ್ನು ಪೊಲೀಸರು ಕೈಗೊಂಡಿದ್ದಾರೆ. ವ್ಯಕ್ತಿಯನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.