ಶಿರಸಿ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಸ್ತಾರ ನ್ಯೂಸ್ ಚಾನಲ್ ಕೊಡಮಾಡುವ ‘ವಿಸ್ತಾರ ಕಾಯಕ ಯೋಗಿ’ ಪುರಸ್ಕಾರಕ್ಕೆ ಕೊಡಗಿನ ನಿವೃತ್ತ ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಆರ್ .ಕೆ. ಬಾಲಚಂದ್ರ ಭಾಜನರಾಗಿದ್ದಾರೆ. ಮೂಲತಃ ಶಿರಸಿಯವರಾದ ಇವರು 4.5 ಲಕ್ಷಕ್ಕೂ ಅಧಿಕ ಯುವ ಕನ್ನಡಿಗರಿಗೆ ಉಚಿತ ಬ್ಯಾಂಕಿಂಗ್ ಪರೀಕ್ಷಾ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದರ ಪ್ರಯುಕ್ತ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಉತ್ತರ ಕನ್ನಡ ಜಿಲ್ಲೆಯನ್ನ ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ – ಅಡಿಕೆ ಹೆಕ್ಕಲು ತೋಟಕ್ಕೆ ಹೋದಾಗ ಬಾವಿಗೆ ಬಿದ್ದು ಮೆಲಕ್ಕೆ ಏಳಲಾಗದೆ ವ್ಯಕ್ತಿ ಸಾವು
ಇದೇ ಬರುವ ನವೆಂಬರ್ 6 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಸ್ತಾರ ನ್ಯೂಸ್ ಚಾನೆಲ್ ಅನಾವರಣ ಕಾರ್ಯಕ್ರಮ ದಲ್ಲಿ ಆರ್. ಕೆ. ಬಾಲಚಂದ್ರ ಸೇರಿದಂತೆ ಕರ್ನಾಟಕದ 32 ವಿವಿಧ ಕ್ಷೇತ್ರದ ಗಣ್ಯರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.