ಶಿರಸಿ : ಇವರ ವಯಸ್ಸು 71, ಉತ್ತರಕನ್ನಡ ಜಿಲ್ಲೆಯ ಶಿರಸಿಯ ಆದರ್ಶ ನಗರದ ನಿವಾಸಿ. ಈ ಯಂಗ್- ಸೀನಿಯರ್ ಸ್ಪೂಡೆಂಟ್ ಸಿವಿಲ್ ಡಿಪ್ಲೋಮಾ ಪೂರ್ಣಗೊಳಿಸಿ ರಾಜ್ಯದಲ್ಲೇ ಫಸ್ಟ್
ರ್ಯಕ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರೇ ನಾರಾಯಣ ಭಟ್ ಇತ್ತೀಚೆಗೆ ಡಿಪ್ಲೊಮಾ ಫಲಿತಾಂಶ ಪ್ರಕಟಗೊಂಡಿದ್ದು, ಸಿವಿಲ್ ವಿಭಾಗದಲ್ಲಿ ನಾರಾಯಣ ಭಟ್ಟರು ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಪಡೆದಿದ್ದಾರೆ. ಬಹುಶಃ ದೇಶದ ಶಿಕ್ಷಣ ವ್ಯವಸ್ಥೆಯಲ್ಲೇ ಅತಿ ಹಿರಿಯ ಸಿವಿಲ್ ಡಿಪ್ಲೊಮಾ ವಿದ್ಯಾರ್ಥಿ ಈ ನಾರಾಯಣ ಭಟ್ರು ಅನ್ನಬಹುದೇನೋ.

ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ
1973ರಲ್ಲಿ ಮೆಕ್ಯಾನಿಕಲ್ ಡಿಪ್ಲೋಮಾದಲ್ಲಿ ರಾಜ್ಯಕ್ಕೆ ದ್ವಿತೀಯ ಶ್ರೇಣಿ ಪಡೆದಿದ್ದ ಇವು, ಬಿಣಗಾದ ಕಾಸ್ಟಿಕ್ ಸೋಡಾ ಫ್ಯಾಕ್ಟರಿಯಲ್ಲಿ ನೌಕರಿಗೆ ಸೇರಿಕೊಂಡಿದ್ದರು. 1993ರವರೆಗೆ ಕರ್ತವ್ಯ ನಿರ್ವಹಿಸಿ, ನಂತರ ಗುಜರಾತ್ ನಲ್ಲಿ 2013ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾಗಿ, ಶಿರಸಿಗೆ ಬಂದು ನಿವೃತ್ತಿ ಜೀವನ ಕಳೆಯುತ್ತಿದ್ದರು.

ಸುಮ್ಮನೆ ಮನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸಿವಿಲ್ ಡಿಪ್ಲೋಮಾ ಮಾಡಬೇಕೆಂಬ ಮಹಾದಾಸೆಯೊಂದಿಗೆ ಇವರು ಪರೀಕ್ಷೆ ಎದುರಿಸಿದವರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು

ಇದನ್ನೂ ಓದಿ – ಬಾವಿಗೆ ಬಿದ್ದು ಒದ್ದಾಡಿ ಕೊನೆಯುಸಿರೆಳೆದ ಶ್ರೀಪಾದ ಹೆಗಡೆ.

ಶಿರಸಿಯ ಆದರ್ಶ ನಗರದ ನಿವಾಸಿ ನಾರಾಯಣ ಭಟ್ ಕಾರವಾರದ ಬಿಣಗಾದ ಕಾಸ್ಟಿಕ್ ಸೋಡಾ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಸುಮಾರು 1993ರವರೆಗೆ ಕರ್ತವ್ಯ ನಿರ್ವಹಿಸಿ, ಬಳಿಕ ಗುಜರಾತ್​ನಲ್ಲಿ 2013ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾದರು.

ತಮ್ಮ ನಿವೃತ್ತಿ ಜೀವನವನ್ನು ಶಿರಸಿಗೆ ಬಂದು ಕಳೆಯುತ್ತಿದ್ದಾರೆ. ಇವರ ಮಕ್ಕಳು ಕೂಡ ಇಂಜಿನಿಯರ್ಸ್​​ ಆಗಿ ಹೊರ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇವರಿಗೆ ಮನೆಯಲ್ಲಿ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಸಿವಿಲ್ ಡಿಪ್ಲೋಮಾ ಮಾಡಬೇಕೆಂಬ ಆಸೆ ಹುಟ್ಟಿದೆ. ಅದರಂತೆ ಮನೆಯವರ ಸಹಾಯದಿಂದ ಶಿರಸಿಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2019ರಲ್ಲಿ ಪ್ರವೇಶಾತಿ ಪಡೆದುಕೊಂಡಿದ್ದಾರೆ.

ಪ್ರಾರಂಭದಲ್ಲಿ ಅಕ್ಕಪಕ್ಕದವರ ಮಾತುಗಳಿಂದ ಕೊಂಚ ಇರಸು ಮುರಿಸುಗೊಂಡರೂ, ಅದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡು ದಿನ ನಿತ್ಯ, ಕಾಲೇಜಿನ ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ಕಾಲೇಜಿನ ತರಗತಿಗೆ ಹಾಜರಾಗಿ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಅನುಸರಿಸಿ ಕೊಂಡು ಅವರಂತೆಯೇ ಕ್ಲಾಸಿನಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಇವರ ಶ್ರದ್ಧೆ ಮತ್ತು ಶ್ರಮಕ್ಕೆ ಎಲ್ಲರೂ ಸಹಕರಿಸಿದ್ದಾರೆ.

RELATED ARTICLES  ಐಪಿಎಸ್ ಅಧಿಕಾರಿ ಆರ್. ದಿಲೀಪ್ ಹೃದಯಾಘಾತದಿಂದ ಸಾವು.

ಉತ್ತರಕನ್ನಡದ ಪ್ರಮುಖ ಎಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಾಲೇಜಿನಲ್ಲಿ ಕೊಡುವ ನಿತ್ಯದ ಹೋಮ್ ವರ್ಕ್ ತಪ್ಪದೇ ಮಾಡಿಕೊಂಡು, ಯಾವುದೇ ತಪ್ಪಿಲ್ಲದ ಹಾಗೆ ಅಚ್ಚುಕಟ್ಟಾಗಿ ಅಭ್ಯಾಸ ಮಾಡಿಕೊಂಡು ಬರುವ ವಿದ್ಯಾರ್ಥಿಗಳ ಸಾಲಿನಲ್ಲಿ ಇವರು ಕಂಡವರು. ಜೊತೆಗೆ ಕಾಲೇಜಿನ ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಮೂರು ವರ್ಷಗಳ ಸಿವಿಲ್ ಡಿಪ್ಲೊಮಾ ಕೋರ್ಸ್​​ಗೆ, ನಿತ್ಯ ತರಗತಿಗೆ ಹಾಜರಾಗಿ ಮೊದಲ ವರ್ಷದಲ್ಲಿ ಶೇ 91 ಅಂಕ ಗಳಿಸಿ ಪ್ರಥಮ ಸ್ಥಾನಗಳಿಸಿದ್ದರು. ನಂತರ ಅಂತಿಮವಾಗಿ 94.88 ಪ್ರತಿಶತ ಫಲಿತಾಂಶ ದಾಖಲಿಸಿ ಇಂದಿನ ಯುವ ವಿದ್ಯಾರ್ಥಿಗಳು ಸ್ಪೂರ್ತಿಯಾಗಿದ್ದಾರೆ.