ಹೊನ್ನಾವರ : ತಾಲೂಕಿನ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸೂಪರ್ ಮೆಗಾ ಕರಿಯರ್ ಕನ್ಸಲ್ಟಿಂಗ್’ ಕಾರ್ಯಕ್ರಮ ಅಭೂತಪೂರ್ವ ರೀತಿಯಲ್ಲಿ ಸಂಯೋಜನೆಗೊಂಡಿತ್ತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸನ್ಮಾನ್ಯ ದಿನಕರ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದೀಪಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು ”ಬಹಳಷ್ಟು ವಿದ್ಯಾರ್ಥಿಗಳು C. A. ಕೋರ್ಸ್ ಅಧ್ಯಯನ ತುಂಬಾ ಕಠಿಣವಾದುದು ಎಂದು ಭಾವಿಸುತ್ತಾರೆ. ಆದರೆ ಯಾವುದೇ ವಿಷಯವನ್ನು ಅಧ್ಯಯನ ಮಾಡುವುದು ಅಸಾಧ್ಯವಲ್ಲ. ಆದರೆ ಅಧ್ಯಯನ ಮಾಡತಕ್ಕ ವಿಷಯದಲ್ಲಿ ಆಸಕ್ತಿ ಹಾಗೂ ಗುರಿಯನ್ನು ಸಾಧಿಸಬೇಕೆನ್ನುವ ಛಲ ಎನ್ನುವುದು ವಿದ್ಯಾರ್ಥಿಗಳಲ್ಲಿ ಇದ್ದಾಗ ಎಲ್ಲವೂ ಸುಲಭಸಾಧ್ಯವಾಗುತ್ತದೆ” ಎಂದು ಹೇಳುವುದರ ಜೊತೆಗೆ ತಮ್ಮ ವಿದ್ಯಾರ್ಥಿಜೀವನದ ಕೆಲವು ನೆನಪುಗಳನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡರು.
ICAI ನ ಉಡುಪಿ ಶಾಖೆಯವರು ಹೊನ್ನಾವರದ M. P. E. ಸೊಸೈಟಿ ಅವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ CA. ಪ್ರದೀಪ್ ಜೋಗಿ ಹಾಗೂ CA. ವಸಂತ ಶಾನಭಾಗ್, M. P. E. ಸೊಸೈಟಿ ಅಧ್ಯಕ್ಷ ಶ್ರೀ ಕೃಷ್ಣಮೂರ್ತಿ ಭಟ್, CA. ಲೋಕೇಶ್ ಶೆಟ್ಟಿ, CA ಪ್ರಭಾಕರ ನಾಯಕ, CA ರಂಗನಾಥ ಆಚಾರ್, CA ಗೀತಾ ಎ.ಬಿ. ವೇದಿಕೆಯಲ್ಲಿ ಇದ್ದರು.