ಸಿದ್ದಾಪುರ : ತಾಲೂಕಿನ ಅಡಕಳ್ಳಿ ಕ್ರಾಸ್ ಬಳಿ ಅ,30 ರಂದು ಎರಡು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ಕಾರಿನ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಕೇಶವ ಕಾಳಿಂಗ ಹೆಬ್ಬಾರ್, ಶ್ರೀಮತಿ ಗೀತಾ ಕೇಶವ ಹೆಬ್ಬಾರ್,ನಾಗೇಂದ್ರ ಎಚ್ ಎಸ್ ಭಟ್ಟ, ಹಾಗೇ ಇನ್ನೊಂದು ಕಾರಿನಲ್ಲಿದ್ದ ನಾರಾಯಣ ಗಣಪತಿ ಹೆಗಡೆ,ಹೇಮಾವತಿ ಗಣಪತಿ ಹೆಗಡೆ,ಪುಷ್ಪಲತಾ ನಾರಾಯಣ ಭಟ್ ಗಾಯಗೊಂಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಕ್ ನಿಂದ ಬಿದ್ದ ವ್ಯಕ್ತಿ ಸಾವು.
ಶಿರಸಿ: ತಾಲೂಕಿನ ಹುಲೆಕಲ್ ರಸ್ತೆಯಲ್ಲಿ ಅ,29 ರಂದು ವ್ಯಕ್ತಿಯೋರ್ವ ಬೈಕಿನ ಹಿಂಬದಿಯಲ್ಲಿ ಕುಳಿತು ಸಾಗುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲಿಂದ ಬಿದ್ದು ತೀವ್ರ ಸ್ವರೂಪದಲ್ಲಿ ಗಾಯವಾದ ಘಟನೆ ನಡೆದಿದೆ.
ಗಾಯಗೊಂಡಿರುವ ವ್ಯಕ್ತಿಯನ್ನು ಮಂಜುನಾಥ ಬಂಗಾರಿ ಭೋವಿವಡ್ಡರ್ ಎಂದು ಗುರುತಿಸಲಾಗಿದ್ದು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅ,31 ರಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.