ಗೋಕರ್ಣ: ಇಲ್ಲಿನ ಹಿರೇಗುತ್ತಿ ಸಮೀಪದ ಮೊರಬಾದ ನಿವಾಸಿ ಬೊಮ್ಮಾ ನಾಗಪ್ಪ ನಾಯಕ ಮುದ್ದನಾಯ್ಕನ ಮನೆ (ವಯಸ್ಸು 83) ಮಂಗಳವಾರ ರಾತ್ರಿ ಸ್ವ ಗ್ರಹದಲ್ಲಿ ನಿಧನರಾದರು. ಮೃತರಿಗೆ ಹನುಮಂತ ನಾಯಕ. ನಾರಾಯಣ ನಾಯಕ ಇಬ್ಬರು ಪುತ್ರರು ಹಾಗೂ ದೇವಮ್ಮ, ಜಾನಕಿ ಇರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೊರಬಾ ಊರಿನ ಜನರಿಗೆಲ್ಲ ಪ್ರೀತಿಯ ಬೊಮ್ಮಕ್ಕ ನಾಗಿದ್ದಳು.
ಮಾಜಿ ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ. ಬಾಲಚಂದ್ರ ಹೆಗಡೆಕರ್ ಹಿರೇಗುತ್ತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಾಂತಾ ಎನ್ ನಾಯಕ. ಬಾವಿಕೇರಿಯ ಜನಪ್ರತಿನಿಧಿ ಉದಯ ವಾಮನ ನಾಯಕ.ರಾಮು ಕೆಂಚನ್ ಹಿರೇಗುತ್ತಿ. ಸುಂಕಸಾಳ ಗ್ರಾಮ ಪಂಚಾಯತ ಅಧ್ಯಕ್ಷರಾದ ಸದಾನಂದ ನಾಯಕ. ತೊರ್ಕೆ ಗ್ರಾಮ ಪಂಚಾಯತ ಸದಸ್ಯ ಮಹೇಶ ನಾಯಕ. ನೀಲಕಂಠ ಎನ್ ನಾಯಕ. ರಾಮದಾಸ ನಾಯಕ ನಾಗರಾಜ ನಾಯಕ.ಆನಂದ ನಾಯಕ.ಮಹೇಶ ನಾಯಕ ಮೊರಬಾ.ನಾರಾಯಣ ನಾಯಕ ಬರ್ಗಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.