ಕುಮಟಾ : ತಾಲ್ಲೂಕಿನ ಹುಲ್ದಾರ್ ಗದ್ದೆ ಬಳಿ ಮಂಗಳವಾರ ಸಂಜೆ ರಸ್ತೆ ಡಾಂಬರಿಕರಣಕ್ಕೆ ಜೆಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್
ಟೈಯರ್ ಸ್ಫೋಟಗೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದರುವ ಬಗ್ಗೆ ವರದಿಯಾಗಿದೆ.
ಸಿದ್ದಾಪುರದಿಂದ ಕುಮಟಾದ ಸಾಂತಗಲ್ ಬಳಿ ನಡೆಯುತ್ತಿರುವ ರಸ್ತೆ ಡಾಂಬರೀಕರಣಕ್ಕೆ ಜಲ್ಲಿಕಲ್ಲುಗಳನ್ನು ತುಂಬಿಕೊಂಡು ಸಿದ್ದಾಪುರ- ಕುಮಟಾ ರಸ್ತೆಯ ದೊಡ್ಮನೆ ಘಟ್ಟದಲ್ಲಿ ತೆರಳುವಾಗ ಹುಲ್ದಾರ್ ಗದ್ದೆ ಬಳಿಯ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಟಯರ್ ಸ್ಫೋಟಗೊಂಡಿದೆ ಎನ್ನಲಾಗಿದೆ.
ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಸಂಪೂರ್ಣ ಲಾರಿ ಸುಟ್ಟು ಕರಕಲಾಗಿದೆ. ಮುರುಡೇಶ್ವರ ಮೂಲದ ಮಾಲಕನ ಟಿಪ್ಪರ್ ಎನ್ನಲಾಗಿದ್ದು, ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಟಿಪ್ಪರ್ ಘಟ್ಟ ಪ್ರದೇಶದಿಂದ ಇಳಿದು ಬಂದಿದ್ದರಿಂದ ಸ್ಫೋಟಗೊಂಡು ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದೆ.ಬೆಂಕಿ ನಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಬಗ್ಗೆ ವರದಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.