ಯಲ್ಲಾಪುರ : ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ಮೋಟಾರ್ ಸೈಕಲ್ ಹಿಂದಿನಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಹಿಂಬದಿ ಸವಾರರು ಗಾಯಗೊಂಡಿರುವ ಘಟನೆ
ಪಟ್ಟಣದ ಪಶು ಆಸ್ಪತ್ರೆಯ ಎದುರಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಗುರುಪ್ರಸಾದ ನಾರಾಯಣ ಸಿದ್ದಿ ಎಂಬಾತನು
ತನ್ನ ಬೈಕಿನಲ್ಲಿ ಈಶ್ವರ ಸಿದ್ಧಿ ಹಾಗೂ ರವಿ ಸಿದ್ಧಿಯನ್ನು ಕೂರಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ .
ಪಟ್ಟಣದ ಪಶು ಆಸ್ಪತ್ರೆಯ ಎದುರಿನ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಟಾಟಾ ಏಸಿ ಗೂಡ್ಸ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಗುರುಪ್ರಸಾದನ ತಲೆಗೆ ಗಂಭೀರವಾಗಿ ಗಾಯಗಳಾಗಿವೆ. ಈ ಕುರಿತಾಗಿ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.