ಕಾರವಾರ: ಮೀನು ವ್ಯಾಪಾರ ಮಾಡುವ ಇಲ್ಲಿನ ಎಲ್.ಐ.ಸಿ ಆಫೀಸ್ ಹತ್ತಿರದ ಖಾರ್ವಿವಾಡ ನಿವಾಸಿ ಸುಮಿತ್ರಾ ವಿಠಲ ಮಾಳಶೇಖರ(70) ಎನ್ನುವವರು ಶಿವಾಜಿ ಸರ್ಕಲ್ ಹತ್ತಿರ ರಸ್ತೆಯನ್ನು ದಾಟಿ ಹೋಗಲು ರಸ್ತೆಯ ಎಡಬದಿಯಲ್ಲಿ ನಿಂತು ಕಾಯುತ್ತಿರುವಾಗ ಕಾಜುಭಾಗ, ಯೂನಿಟಿ ಕಾಲೋನಿ ನಿವಾಸಿ ಸಲ್ಮಾ ಎನ್ನುವವರು ತಮ್ಮ ಸ್ಕೂಟರ್‌ನಲ್ಲಿ ಬಂದು ಸುಮಿತ್ರಾ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾರೆ ಎಂದು ಸಂಚಾರ ಪೊಲೀಸ್ಠಾ ಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಿತ್ರಾ ಅವರ ಪುತ್ರ ಅನೀಲ್ ವಿಠಲ ಮಾಳಶೇಖರ ದೂರು ನೀಡಿದ್ದಾರೆ.
ಕುಡಿದ ನಶೆಯಲ್ಲಿ ಬಾವಿಯಲ್ಲಿ ಬಿದ್ದು ಸಾವು.
ಕಾರವಾರ :ತಾಲೂಕಿನ ಕೃಷ್ಣಾಪುರ, ಕೊಳಗೆ ನಿವಾಸಿ, ಕೂಲಿ ವೃತ್ತಿಯ ರಮೇಶ ಶ್ರೀಕಾಂತ ಕೋಠಾರಕರ(57) ಎನ್ನುವವರು ಕುಡಿದ ನಶೆಯಲ್ಲಿ ಸಾರ್ವಜನಿಕ ಬಾವಿಯ ಕಟ್ಟೆಯ ಮೇಲೆ ಕುಳಿತವರು ಆಯ ತಪ್ಪಿ ಬಿದ್ದು ಮೃತ ಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರ ಶ್ರೀಕಾಂತ ಕೋಠಾರಕರ ಚಿತ್ತಾಕುಲಾ ಪೊಲೀಸ್
ಉದಯ ಠಾಣೆಯಲ್ಲಿ ದೂರು ನೀಡಿದ್ದಾರೆ.