ಶಿರಸಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅಕ್ಟೋಬರ್ 27, 2022 ರಂದು ಪ್ರೊಗ್ರೆಸ್ಸಿವ್ ಪ್ರೌಢಶಾಲೆ, ಶಿರಸಿಯಲ್ಲಿ ಆಯೋಜಿಸಲಾಗಿದ್ದ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿರಸಿ ಲಯನ್ಸ್ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ. ಸ್ತುತಿ ತುಂಬಾಡಿ “ಇಂಜಿನಿಯರಿ೦ಗ್ ಮತ್ತು ಕಂಪ್ಯೂಟರ್ ಸೈನ್ಸ್” ಎಂಬ ವಿಷಯದಡಿಯಲ್ಲಿ ಪ್ರದರ್ಶಿಸಿದ ವಿಜ್ಞಾನ ಮಾದರಿಗೆ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದರೊಂದಿಗೆ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾಳೆ. ಈ ವಿದ್ಯಾರ್ಥಿನಿಗೆ ಲಯನ್ಸ್ ಶಾಲೆಯ ಸಹಶಿಕ್ಷಕಿಯರಾದ ಶೃತಿ ಪವಾರ ಹಾಗೂ ಕವಿತಾ ಭಟ್ ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು, ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕ, ಶಿಕ್ಷಕೇತರ ಭಾಂದವರು, ಲಯನ್ಸ್ ಕ್ಲಬ್ ಬಳಗ ಮತ್ತು ವಿದ್ಯಾರ್ಥಿಯ ಪಾಲಕರು ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

RELATED ARTICLES  ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಆರ್ಥಿಕ ದುರ್ಬಲರಿಗೆ ಹಾಗೂ ರೈತಾಬಿ ಜನರ ಸರ್ವತೋಮುಖ ಅಭಿವೃದ್ಧಿ : ರವೀಂದ್ರ ನಾಯಕ