ಕುಮಟಾ: ಕರ್ನಾಟಕ ರಾಜ್ಯ ಬೋಧಕರ ಸಂಘ ಹಾಗೂ ಕರ್ನಾಟಕ ಸಂಸ್ಕೃತ ಪರಿಷತ್‌ನ ರಾಜ್ಯಾಧ್ಯಕ್ಷರಾದ ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಹೆಸರಾಂತ- ಜನಪ್ರಿಯ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿಯವರಿಗೆ ಹುಬ್ಬಳ್ಳಿಯ ಪ್ರತಿಷ್ಠಿತ “ವಿಶ್ವದರ್ಶನ” ಪತ್ರಿಕೆಯ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ.
ತಮ್ಮ ಮಾತು ಮತ್ತು ಬರವಣಿಗೆಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ವಯೋಮಾನಕ್ಕೂ ಮೀರಿದ ಅಪರೂಪದ ವಿದ್ವತ್ ಪ್ರತಿಭೆಯಾಗಿ ಅನಾವರಣಗೊಂಡ ಮಂಜುನಾಥ ಬರ್ಗಿಯವರು ಅತ್ಯುನ್ನತವಾದ ವಿದ್ಯಾರ್ಹತೆಯನ್ನು ಹೊಂದಿ, ಸೃಜನಶೀಲವಾದ ಕೃತಿಗಳನ್ನು ನೀಡಿ, ಬಹು ಬೇಡಿಕೆಯ ಯಕ್ಷಗಾನ ಕಲಾವಿದರಾಗಿ, ತಾಳಮದ್ದಲೆಯ ಪ್ರಬುದ್ಧ ಅರ್ಥಧಾರಿಗಳಾಗಿ, ಸೇವಾ-ಕಾನೂನು ತಜ್ಞರಾಗಿ, ವಿದ್ಯಾರ್ಥಿಗಳ ರೋಲ್ ಮಾಡಲ್ ಅಧ್ಯಾಪಕರಾಗಿ, ರಚನಾತ್ಮಕವಾದ ಸಂಘಟನೆಗಳೊAದಿಗೆ ಸಕ್ರೀಯರಾಗಿ ಕನ್ನಡದ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಗಳ ಕುರಿತಾಗಿ ಹೊಂದಿರುವ ಪ್ರಜ್ಞಾಪೂರ್ವಕ ಕಳಕಳಿಗಾಗಿ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆಯೆಂದು “ವಿಶ್ವದರ್ಶನ” ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಎಸ್.ಎಸ್. ಪಾಟೀಲರವರು ಅಭಿಪ್ರಾಯಿಸಿದ್ದಾರೆ.


ಮಂಜುನಾಥ ಗಾಂವಕರ್ ಬರ್ಗಿಯವರ ಶಿಕ್ಷಣ, ಸಾಹಿತ್ಯ, ಯಕ್ಷಗಾನ ಹಾಗೂ ಸಂಘಟನಾತ್ಮಕವಾದ ವ್ಯಕ್ತಿತ್ವವು ಅನನ್ಯವಾದುದು. ಕನ್ನಡ, ಸಂಸ್ಕೃತ, ಇತಿಹಾಸ, ಶಿಕ್ಷಣ ಮತ್ತು ಪತ್ರಿಕೋದ್ಯಮವನ್ನೊಳಗೊಂಡು ಐದು ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿ, ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಫೆಲೋಶಿಪ್‌ನಡಿಯಲ್ಲಿ “ಮಕ್ಕಳ ಒತ್ತಡ ನಿರ್ವಹಣೆ” ಎಂಬ ವಿಷಯದ ಕುರಿತು ಕಿರು ಸಂಶೋಧನೆಯನ್ನು ಕೈಗೊಂಡಿದ್ದು, ಪ್ರಸ್ತುತ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ “ಯಕ್ಷಗಾನದಲ್ಲಿ ಸಂಸ್ಕೃತ ಸಾಹಿತ್ಯ” ಪಿ.ಎಚ್.ಡಿ. ವ್ಯಾಸಂಗವನ್ನು ಮಾಡುತ್ತಿದ್ದಾರೆ. ವರ್ಗಕೋಣೆಯಲ್ಲಷ್ಟೇ ಸಮರ್ಥ ಅಧ್ಯಾಪಕರಾಗಿರದೇ ಭಾಷಣ, ಚರ್ಚೆ ಹಾಗೂ ಉಪನ್ಯಾಸಗಳ ಮೂಲಕವಾಗಿ ಶಾಲಾ-ಕಾಲೇಜು ದಿನಗಳನ್ನು ಪ್ರಬರ ವಾಗ್ಮಿಯಾಗಿ ರಾಜ್ಯ ಹಾಗೂ ಅಂತರ್ ವಿಶ್ವವಿದ್ಯಾಲಯ ಮಟ್ಟದ ಹಲವಾರು ಪ್ರಶಸ್ತಿ-ಫಲಕ-ಬಹುಮಾನಗಳಿಗೆ ಭಾಜನರಾಗಿದ್ದಾರೆ.

RELATED ARTICLES  ಸಾಮರಸ್ಯದ ಪ್ರತೀಕವಾಗಿ ನಡೆಯಿತು ಚಂದಾವರ ಪೇಸ್ತ: ಸಂಪನ್ನವಾದ ಧಾರ್ಮಿಕ ವಿಧಿ


ಮಂಜುನಾಥ ಗಾಂವಕರ್ ಬರ್ಗಿಯವರ ಒಮ್ಮೆ ಗರತಿಯಾಗಬೇಕು(ಕವನ ಸಂಕಲನ), ಇಂಗಿತ, ನಿಯತಿ, ಚಂದ್ರಯಾನ, ಅವನಿ, ಸ್ನೇಹಮುಖಿ, ಶ್ರೀಮಾನ್ಯ, ಅಂಕೋಲಿಗರ ಕವಿತೆಗಳು, ನೇಸರ, ಗೀತ ಗೌತಮ, ಎದೆಯ ದನಿ ಹಾಗೂ ಯಶೋಮುಖಿ(ಸಂಪಾದಿತ), ಮಾಸ್ಕೇರಿಯಾನ(ನಿರೂಪಣೆ), ನಂಬಿಕೆಯ ನೆಲೆವೀಡು ನೀಲಗೋಡು(ಕ್ಷೇತ್ರ ಪರಿಚಯ) ಹಾಗೂ ಅಡಿಗೋಣದಂಗಣ(ಯಶೋಗಾಥೆಯ ಅಭಿನಂದನ)- ಎಂಬ ವೈವಿಧ್ಯಮಯವಾದ ಹದಿನೈದು ಕೃತಿಗಳು ಬೆಳಕುಗೊಂಡಿವೆ. ಕರ್ಮವೀರ, ಸಂಯುಕ್ತ ಕರ್ನಾಟಕ, ಕರಾವಳಿ ಮುಂಜಾವು, ಅಘನಾಶಿನಿ, ಜನಮಾಧ್ಯಮ ಹಾಗೂ ರೇಷ್ಮೆ ನಾಡು ಮೊದಲಾದ ಪತ್ರಿಕೆಗಳಲ್ಲಿ ಇವರ ಬಿಡಿ ಲೇಖನಗಳು ಹಾಗೂ ಕವಿತೆಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟಗೊಂಡಿವೆ.


ಕನ್ನಡ ಚಂದ್ರಮ, ಯಕ್ಷಾಂಜನೇಯ, ಯಕ್ಷಮುಖಿ, ನವ ಕರ್ನಾಟಕ ಸಂಘ(ರಿ.), ಅಂಕೋಲಾ, ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠ, ಬರ್ಗಿ, ಕುಮಟಾ ಕನ್ನಡ ಸಂಘ, ಚಾಮರಾಜನಗರದಲ್ಲಿ ಇಂಗಿತ ಹಾಗೂ ಸಂಸ್ಕೃತ ವಾಹಿನಿ- ಎಂಬ ಸಂಘಟನೆಗಳನ್ನು ಹುಟ್ಟುಹಾಕಿ ಸದಭಿರುಚಿಯ ಕಾರ್ಯಚಟುವಟಿಕೆಗಳಿಗೆ ಭೂಮಿಕೆಯನ್ನೊದಗಿಸಿ ಹಲವಾರು ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದಾರಲ್ಲದೆ- ಸುವಿಖ್ಯಾತರನ್ನು ಆದರಿಸಿ ಸಾಹಿತ್ಯಿಕ-ಸಾಂಸ್ಕೃತಿಕವಾಗಿ ‘ಸೈ’ ಎನಿಸಿಕೊಂಡಿದ್ದಾರೆ.


‘ಚಂಡೆಯ ಗಂಡುಗಲಿ’ ಯೆನಿಸಿದ ದಿ. ಶಾಂತಾರಾಮ ಭಂಡಾರಿಯವರಿAದ ಎಳವೆಯಲ್ಲಿಯೇ ಯಕ್ಷಗಾನವನ್ನು ಶಾಸ್ತಿçÃಯವಾಗಿ ಅಭ್ಯಸಿಸಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಕಲಿಕೆಯಲ್ಲಿದ್ದಾಗಲೇ ರಜಾ ದಿನಗಳಲ್ಲಿ ಹಾಲಾಡಿ, ಶಿರಸಿ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಡಿ ಹೆಸರಾಂತ ಕಲಾವಿದರೊಂದಿಗೆ ಒಡನಾಡಿದ್ದಾರೆ. ಅನೇಕ ಬಯಲಾಟದ ಮೇಳಗಳಲ್ಲಿಯೂ ಸ್ತಿçÃ-ಪುರುಷ ಪಾತ್ರಗಳೆರಡನ್ನೂ ನಿರ್ವಹಿಸಿ ‘ಬೇಷ್’ ಎನಿಸಿಕೊಂಡಿದ್ದಾರೆ. ವಿಕ್ರಮ, ರಾಮ, ಅಯ್ಯಪ್ಪ, ಈಶ್ವರ, ಬ್ರಹ್ಮ, ಭೀಷ್ಮ, ಪರಶುರಾಮ, ಅಂಬೆ, ದ್ರೌಪತಿ, ಕೃಷ್ಣ, ಅರ್ಜುನ, ಸುದನ್ಮ, ಭೀಮ, ಹನುಮಂತ ಹಾಗೂ ರಾವಣ ಮೊದಲಾದ ಪಾತ್ರಗಳಲ್ಲಿ ತಮ್ಮ ಸೃಜನಶೀಲವಾದ ವಿಶೇಷ ಕಲಾವಂತಿಕೆಯನ್ನು ತೋರಿದ್ದಾರೆ. ತಾಳ ಮದ್ದಲೆಗಳಲ್ಲೂ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಶ್ರೇಷ್ಠರೊಂದಿಗೆ ಭಾಗವಹಿಸಿ ಮೆಚ್ಚುಗೆಯನ್ನು ಪಡೆದಿದ್ದಾರೆ.
ವಿಶ್ವದರ್ಶನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದ ಮಂಜುನಾಥ ಬರ್ಗಿಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಅಭಿಮಾನದ ಅಭಿನಂದನೆಯೆ ಮಹಾಪುರವೇ ಹರಿದಿದೆ. ಅವರನ್ನು ನಾಡಿನ ಹೆಸರಾಂತ ಕವಿ ಮಾಸ್ಕೇರಿ ಎಮ್.ಕೆ ನಾಯಕ, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಈಶ್ವರ ನಾಯ್ಕ, ನಿಕಟಪೂರ್ವ ಉಪನಿರ್ದೇಶಕ ಹರೀಶ ಗಾಂವಕರ, ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ನಾಗರಾಜ ನಾಯಕ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನರೇಂದ್ರ ನಾಯಕ, ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ್, ಕ್ಷೇತ್ರಸಮನ್ವಯಾಧಿಕಾರಿ ರೇಖಾ ನಾಯ್ಕ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪೈ, ಸಂಚಾಲಕ ವಿಜಂiÀiಕುಮಾರ್ ನಾಯ್ಕ, ಸಮರ್ಪಣ ವಿಶ್ರಾಂತ ಶಿಕ್ಷಕರ ಬಳಗ ಅಂಕೋಲಾದ ಅಧ್ಯಕ್ಷ ಎನ್.ಬಿ. ನಾಯಕ ಸೂರ್ವೆ, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುಧೀರ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ಉಪನ್ಯಾಸಕರಾದ ಹರೀಶ ನಾಯಕ ಬೆಲೇಕೇರಿ, ಮಹೇಶ ನಾಯಕ ಹಿಚ್ಕಡ, ಗಿರೀಶ ವನ್ನಳ್ಳಿ, ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ, ಅಧ್ಯಾಪಕರಾದ ರಾಜೇಶ ಸೂರ್ವೆ, ರಾಜೇಂದ್ರ ಕೇಣಿ, ರಾಜಂ ಹಿಚ್ಕಡ, ಮಹಮ್ಮದ್ ಷಪಿ, ಬಾಲಚಂದ್ರ, ಮೋಹನ್ ನಾಯ್ಕ ಹಾಗೂ ರಾಜು ನಾಯ್ಕ ಮೊದಲಾದವರು ಅಭಿನಂದಿಸಿದ್ದಾರೆ.

RELATED ARTICLES  ಕರಾವಳಿ ಮೀನುಗಾರರ ಕಷ್ಟಕ್ಕೆ ಸ್ಪಂದಿಸುವ ಭರವಸೆ : ಶಾಸಕರನ್ನೊಂಳಗೊಂಡ ನಿಯೋಗದಿಂದ ಕಾರ್ಯ