ಕಾರವಾರ : ಕಳೆದ ಕೆಲ ತಿಂಗಳುಗಳಿಂದ ಎಸ್ಪಿ ವರ್ಗಾವಣೆ ವಿಷಯದ ಕುರಿತು ಆಗಾಗ ಸುದ್ದಿಗಳು ಕೇಳಿಬರುತ್ತಿತ್ತು, ಆದರೆ ಇದೀಗ ಜಿಲ್ಲೆಯ ಖಡಕ್ ಪೊಲೀಸ್ ಆಫೀಸರ್ ಎಂದೇ ಹೆಸರಾಗಿದ್ದ ಎಸ್ಪಿ ಸುಮನ್ ಪೆನ್ನೇಕರ್ ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ.

ಕೆಲದಿನಗಳ ಹಿಂದಷ್ಟೇ ಈ ಹಿಂದಿನ ಜಿಲ್ಲಾಧಿಕಾರಿ ಮುಲೈ ಮುಗಿಲನ್ ವರ್ಗಾವಣೆಗೊಂಡಿದ್ದು,ಎಸ್ ಪಿ ಸದ್ಯಕ್ಕೆ ವರ್ಗಾವಣೆಗೊಳ್ಳಲಾರರು ಎಂದು ಜನರ ಆಡಿಕೊಳ್ಳುತ್ತಿದ್ದರು.ಅಂತೆಯೇ ಇತ್ತೀಚಿಗಷ್ಟೇ ರಾಜ್ಯದ ವಿವಿಧ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿತ್ತಾದರೂ,ಅಲ್ಲಿ ಸುಮನ್ ಪೆನ್ನೇಕರ್ ಹೆಸರಿರದೇ ಅವರು ಮತ್ತಷ್ಟು ಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಾರೆ ಎನ್ನುವ ಭರವಸೆ ಮೂಡಿತ್ತು .ಇದೀಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎನ್ . ವಿಷ್ಣುವರ್ಧನ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

RELATED ARTICLES  ಬಸ್ ತೊಂದರೆ ಬಗ್ಗೆ ಗಮನ ಸೆಳೆದ ಶಿಕ್ಷಕರು : ಮಕ್ಕಳ ಬಿಡದಂತೆ ಸೂಚಿಸುವೆ- ಸೌಮ್ಯಾ ನಾಯಕ ಪ್ರತಿಕ್ರಿಯೆ.

ಪನ್ನೇಕರ್ ಅವರು ಅವರ ಕಾಲಾವಧಿಯಲ್ಲಿ ಅಕ್ರಮ ದಂಧೆಗಳು ಬಹುತೇಕ ಹತೋಟಿಗೆ ಬಂದಿದ್ದವು. ಇದೀಗ ಎಸ್ ಪಿ ವಿಷ್ಣುವರ್ಧನ್ ಸಹ ಖಡಕ್ ಆಫೀಸರ್ ಎಂದೇ ಹೇಳಲಾಗಿದ್ದು ಅವರಮೇಲೆಯೂ ಜನ ನೂರಾರು ನಿರೀಕ್ಷೆ ಇಟ್ಟಿದ್ದಾರೆ.

RELATED ARTICLES  ಹಾಲಕ್ಕಿಗಳಜೊತೆ ಸುಗ್ಗಿಗೆ ಹೆಜ್ಜೆ ಹಾಕಿದ ಅನಂತ್ ಕುಮಾರ್ ಹಾಗೂ ಕಾರವಾರದ ನಾಗರಾಜ ನಾಯಕ