ಶಿರಸಿ: ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಂಡಿರುವ ಹಾಣಜಿಮನೆ ಬಳಿ ಬೈಕ್ ಹಂಪ್ ದಾಟುವಾಗ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಆಯತಪ್ಪಿ ಬಿದ್ದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ದುರ್ಘಟನೆ ಗುರುವಾರ ನಡೆದಿದೆ. ತಾಲೂಕಿನ ಅಜ್ಜೀಬಳ ಬಾಳಗಾರಿನ ಜಯಲಕ್ಷ್ಮೀ ಹೆಗಡೆ ಮೃತ ದುರ್ದೈವಿಯಾಗಿದ್ದಾಳೆ. ತಾಯಿ ಮತ್ತು ಮಗ ಬೈಕ್ ಮೇಲೆ ಚಲಿಸುತ್ತಿದ್ದಾಗ ಬೈಕ್ ಹಂಪ್ ಮೇಲೆ ಹತ್ತಿದಾಗ ಹಿಂಬದಿಯಲ್ಲಿ ಕುಳಿತಿದ್ದ ಸವಾರನ ತಾಯಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ. ಬಿದ್ದ ಕೂಡಲೇ ತೀವ್ರತರ ಪೆಟ್ಟಾಗಿದ್ದ ಆಕೆಯನ್ನು ಶಿರಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ ಎಂಬ ಮಾಹಿತಿ ದೊರಕಿದೆ.

RELATED ARTICLES  ಟೈಲ್ಸ್ ಲಾರಿ ಪಲ್ಟಿ