ಕುಮಟಾ : ನಾಡಿನ ಪ್ರಸಿದ್ಧ ದೇಗುಲ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಂಚಿಕಾ ಪರಮೇಶ್ವರಿ ದೇವಿಗೆ ಕಾರ್ತಿಕ ಅಮಾವಾಸ್ಯೆಯ ದಿನವಾದ ನವೆಂಬರ್ 23 ರಂದು ಬುಧವಾರ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ನೆರವೇರಿಸಲು ದೇವಿಯ ಭಕ್ತವೃಂದವಾದ ಗ್ರಾಮಸ್ಥರು ಭರದಿಂದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.ಕಳೆದ ಹಲವಾರು ವರ್ಷಗಳ ಬಳಿಕ ಈ ದೇವಸ್ಥಾನದಲ್ಲಿ ಜರುತ್ತಿರುವ ಮಹತ್ವದ ಆರಾಧನೆ ಇದಾಗಿದ್ದು ದೇವಿಯ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದರ್ಶನವನ್ನು ಪಡೆಯಲಿದ್ದಾರೆ. ನ್ಯಾಯವಾದಿ ಆರ್ ಜಿ ನಾಯ್ಕ ಅವರ ಅಧ್ಯಕ್ಷತೆಯ ದೀಪೋತ್ಸವ ಸಮಿತಿಯನ್ನು ರಚಿಸಿಕೊಂಡು ಈ ಭಾಗದ ಎಲ್ಲಾ ಸಮುದಾಯದ ಪ್ರತಿನಿಧಿಗಳೂ ಸಮಿತಿಯ ಸದಸ್ಯರಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಕಾಂಚಿಕಾ ಪರಮೇಶ್ವರಿ ದೇಗುಲವು ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿದ್ದು ಪ್ರಾಕೃತಿಕ ಸೌಂದರ್ಯದಿಂದ ಸರ್ವರ ಗಮನವನ್ನು ಸೆಳೆದಿದೆ.ದೇವಿಯ ಪವಾಡಗಳ ಕುರಿತಾಗಿ ಭಕ್ತರ ಅತೀವ ನಂಬಿಕೆ ಹಾಗೂ ದೇವಿಯ ಪರಿವಾರ ದೇವರುಗಳ ಕುರಿತಾದ ಪ್ರತೀತಿಯಿಂದ ರಾಜ್ಯದ ಪ್ರಮುಖ ದೇವಾಲಯಗಳಿ ಒಂದಾಗಿ ಈ ದೇವಸ್ಥಾನ ಗುರುತಿಸಿಕೊಂಡಿದೆ.ಪ್ರತೀ ವರ್ಷವೂ ಜರುಗುವ ದೇವಿಯ ಜಾತ್ರಾ ಉತ್ಸವ ಪರಿವಾರ ದೇವರುಗಳ ಕಲಶಗಳ ಮೆರವಣಿಗೆ, ದರ್ಶನ ಶ್ರಾವಣದ ಭಜನಾ ಸಪ್ತಾಹ ನವರಾತ್ರಿಯ ವಿಶೇಷ ಪೂಜೆ ಹಾಗೂ ಸರಣಿ ಯಕ್ಷಗಾನ ಕಾರ್ಯಕ್ರಮಗಳು ಇಲ್ಲಿನ ವಿಶೇಷತೆಯಾಗಿದೆ.
ಇದನ್ನೂ ಓದಿ – ಶಿಕ್ಷಕರು ಹಾಗೂ ಶಿಕ್ಷಕರಾಗಬೇಕು ಎಂದಿರುವವರಿಗೆ ಮಹತ್ವದ ಮಾಹಿತಿ.
ಪ್ರತೀವರ್ಷವೂ ಕಾರ್ತಿಕ ಅಮವಾಸ್ಯೆ ದಿವಸ ಈ ದೇಗುಲದಲ್ಲಿ ದೀಪೋತ್ಸವ ಜರುತ್ತಿದ್ದು ಕೊರೊನಾ ಕಾಲಘಟ್ಟದಲ್ಲಿ ಸ್ತಬ್ದವಾದ ವಿಶೇಷ ಕಾರ್ಯಕ್ರಮಗಳು ಮತ್ತೆ ಪುನರಾರಂಭಗೊಂಡಿದ್ದು ಈ ಬಾರಿಯ ಲಕ್ಷದೀಪೋತ್ಸವ ಎಲ್ಲರ ಗಮನ ಸೆಳೆದಿದೆ. ಈ ಈಗಾಗಲೇ ದಾವಣಗೆರೆಯಿಂದ ಒಂದು ಲಕ್ಷ ದೀಪಗಳನ್ನು ಖರೀದಿಸಲಾಗಿದ್ದು ಈ ಕಾರ್ಯಕ್ರಮದ ನಿಮಿತ್ತ ವಿಶೇಷ ಕೌಂಟರ್ ಗಳನು ತೆರೆದು ಭಕ್ತಾಧಿಗಳಿಗೆ ತಮ್ಮ ಸೇವೆಯನ್ನು ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ನವೆಂಬರ್ 20 ನೆ ತಾರೀಖಿನಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿದ್ದು.22 ರ ಸಾಂಯಕಾಲ ದೀಪ ನಮಸ್ಕಾರಕ್ಕೂ ವ್ಯವಸ್ಥೆ ಮಾಡಲಾಗಿದೆ.
ವೈಯಕ್ತಿವಾಗಿ ದೀಪಬೆಳಗುವ ಬಯಕೆ ಉಳ್ಳವರು ಮುಂಚಿತವಾಗಿಯೇ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕಾಗುತ್ತದೆ. ಒಟ್ಡಾರೆಯಾಗಿ ಅಪರೂಪದ ಈ ದೀಪೋತ್ಸವ ಕಾರ್ಯಕ್ರಮ ಈ ವರ್ಷದ ವಿಶೇಷತೆಯಾಗಿದೆ.