ಕಾರವಾರ: ಜಿಲ್ಲೆಯ ಖಡಕ್ ಪೊಲೀಸ್ ಆಫೀಸರ್ ಎಂದೇ ಹೆಸರಾಗಿದ್ದ ಎಸ್ಪಿ ಸುಮನ್ ಪೆನ್ನೇಕರ್ ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ. ಉ. ಕ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎನ್ . ವಿಷ್ಣುವರ್ಧನ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದ ನಂತರದಲ್ಲಿ ಈ ಹಿಂದಿನ ಎಸ್‌ ಪಿಯಾಗಿದ್ದ ಸುಮನ್ ಪೆನ್ನೇಕರ್ ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಯಿಂದ ಎಲ್ಲರ ಮನಮಿಡಿಯುವಂತಹ ಮೆಸೇಜ್ ಮೂಲಕ ಉತ್ತರ ಕನ್ನಡದ ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ವೀರೇಶ್ವರ ಶಿವಯೋಗಿ ಸ್ವಾಮಿಗಳು.

ಕಳೆದ ಕೆಲ ತಿಂಗಳುಗಳಿಂದ ಎಸ್ಪಿ ವರ್ಗಾವಣೆ ವಿಷಯದ ಕುರಿತು ಆಗಾಗ ಸುದ್ದಿಗಳು ಕೇಳಿ ಬರುತ್ತಿತ್ತಲ್ಲದೇ ಕೆಲ ಕಾಣದ ಕೈಗಳು ತಮ್ಮ ರಾಜಕೀಯ ಪ್ರಭಾವ ಬೀರಿ ಎಸ್ ಪಿ ವರ್ಗಾವಣೆಗೆ ಹುನ್ನಾರ ನಡೆಸುತ್ತವೆ ಎಂಬ ನಿಲುವನ್ನು ಖಂಡಿಸಿ, ಮಹಿಳಾ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾಯಿಸದಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಈ ಎಲ್ಲ ವಿಷಯವನ್ನು ಬದಿಗಿಟ್ಟು ಅತ್ಯಂತ ಮಾರ್ಮಿಕವಾಗಿ ಇವರು ತಮ್ಮ facebook ಮೂಲಕ ಜನರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಇದೀಗ ಅವರ ಮಾತುಗಳು ತುಂಬಾ ವೈರಲ್ ಆಗುತ್ತಿದ್ದು ಜನತೆ ಕೂಡ ಇವರು ಮತ್ತೆ ನಮ್ಮೊಂದಿಗಿರಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿ ಅವರ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

IMG 20221104 WA0000 1

ಎಸ್ ಪಿ ಸುಮನ್ ಪೆನ್ನೇಕರ್ ಅವರನ್ನು ವರ್ಗಾಯಿಸಿದ್ದು, ಜಿಲ್ಲೆಯ ಹಲವು ಪ್ರಜ್ಞಾವಂತರ ಪಾಲಿಗೆ ಇದು ನಿರಾಶೆಯ ಭಾವನೆ ಉಂಟು ಮಾಡಿದೆ. ಇದೀಗ ಇವರ ಮೆಸೇಜ್ ಓದಿದ ಜನರು ಭಾವುಕವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

RELATED ARTICLES  ಮತ್ತೆ ಸದ್ದು ಮಾಡಿದ ಅಕ್ರಮ ಜಾನುವಾರು ಸಾಗಾಟ ಪ್ರಕರಣ.