ಗೋಕರ್ಣ: ಗಂಗಾವಳಿ, ಮಂಜಗುಣಿ ಸೇತುವೆ ಕಾಮಗಾರಿ ಪೂರ್ಣಗೊಲಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ಬೆಳಿಗ್ಗೆ ಭಾಸ್ಕರ ಪಟಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಮಾತನಾಡಿದ ಭಾಸ್ಕರ ಪಟಗಾರ ಕಳೆದ ವರ್ಷವೇ ಕಾಮಗಾರಿ ಆರಂಭ ಗೊಂಡಿದ್ದು, ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ದಿನಕ್ಕೆ ಸಾವಿರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡಲಿದ್ದು ಕಾಲೇಜು ವಿದ್ಯಾರ್ಥಿಗಳಿಗೆ, ತರಕಾರಿ ಹಾಗೂ ಮೀನು ಮಾರಾಟಗಾರರಿಗೆ ತುಂಬಾ ಉಪಯೋಗವಾಗುವ ಈ ಬ್ರಿಜ್ ಇಲ್ಲಿಯವರೆಗೆ ಪೂರ್ಣಗೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ. ಇನ್ನು ಕಾಮಗಾರಿ ಪೂರ್ಣಗೊಳ್ಳದೇ ಇದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಮುಂದಿನದಿನದಲ್ಲಿ ಮಾಡಲಿದ್ದೇವೆ ಎಂದರು.

RELATED ARTICLES  ಬೊಲೇರೋ ಡಿಕ್ಕಿ : ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ವಿದ್ಯಾರ್ಥಿನಿ

ನಂತರ ಮನವಿಯನ್ನು ಗೋಕರ್ಣ ಉಪತಸೀಲ್ದಾರ ಎ ವಿ ನಾಯ್ಕ ಅವರಿಗೆ ನೀಡಲಾಯಿತು. ಉಪತಹಸೀಲ್ದಾರ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಬ್ರಿಜ್ ಕಾಮಗಾರಿ ಗುತ್ತಿಗೆ ಪಡೆದ ಅಧಿಕಾರಗಳೊಂದಿಗೆ ಮಾತನಾಡಿ ಇನ್ನು ಹದಿನೈದು ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರದೀಪ ನಾಯಕ ದೇವರಬಾವಿ, ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ ಇತರ ಪ್ರಮುಖರು ಹಾಜರಿದ್ದರು. ನೂರಾರು ಸಂಖ್ಯೆಯ ಸಾರ್ವಜನಿಕರು ಹಾಜರಿದ್ದರು.

RELATED ARTICLES  ಕೊಂಕಣದ ಸಿ.ವಿ.ಎಸ್.ಕೆ. ಪ್ರೌಢಶಾಲೆಯಿಂದ ಶೇ. 100 ಫಲಿತಾಂಶ