ಹೊನ್ನಾವರ : ತಾಲೂಕಿನ ಗೇರುಸೊಪ್ಪಾ ವೃತ್ತದ ಬಳಿ ಸೇಬು ತುಂಬಿಕೊoಡು ದೆಹಲಿಯಿಂದ ಮಂಗಳೂರ ಕಡೆಗೆ ಸಂಚರಿಸುತ್ತಿದ್ದ ಲಾರಿ , ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ವರದಿಯಾಗಿದೆ. ಇಂದು ಬೆಳಗಿನಜಾವ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಲಾರಿ ಬಿದ್ದ ರಭಸಕ್ಕೆ ಸೇಬು ತುಂಬಿದ ಬಾಕ್ಸ್ ಒಡೆದು ಹೋಗಿ ರಸ್ತೆಯ ಪಕ್ಕಕ್ಕೆ ಲಾರಿಯಲಿದ್ದ ಸೇಬು ಬಾಕ್ಸ್ಗಳು ಬಿದ್ದಿದ್ದವು ಎನ್ನಲಾಗಿದೆ.

RELATED ARTICLES  ಹಳದೀಪುರದಲ್ಲಿ ಉಲ್ಬಣಿಸಿದ ಮೀನು ಮಾರುಕಟ್ಟೆ ವಿವಾದ

ಈ ಅಪಘಾತದಲ್ಲಿ ಲಾರಿ ಚಾಲಕನ ಕಾಲಿಗೆ ಗಾಯವಾಗಿದ್ದು , ಕ್ಲೀನರ್‌ಗೆ ಮುಖಕ್ಕೆ ಗಾಯವಾಗಿದೆ ಎನ್ನಲಾಗಿದ್ದು ಇವರನ್ನು ತಾಲೂಕ ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ಇನ್ನು ಕೆಳಗೆ ಬಿದ್ದಿದ್ದ ಎಲ್ಲಾ ಸೇಬುಗಳನ್ನು ಸಂಗ್ರಹಿಸಿ ಲಾರಿಯನ್ನು ಮೇಲೆತ್ತಲಾಗಿದೆ, ಹೊನ್ನಾವರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.