ಕಾರವಾರ : ಆರ್ಮಿಯಲ್ಲಿ ಉನ್ನತಾಧಿಕಾರಿ ಎಂದು ಹೇಳುತ್ತಾ ಅಡ್ಡಾಡುತ್ತಿದ್ದ ಫೇಕ್ ಆರ್ಮಿ ಅಫೀಸರ್ ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಕಾರವಾರ ಸಿದ್ಧರ ನಿವಾಸಿ ವಿನಾಯಕ ಮಹಾಲೆ ಎಂಬಾತ ಲೆಫ್ಟಿನೆಂಟ್ ಕರ್ನಲ್ ರ್ಯಾಂಕಿಂಗ್ ಯೂನಿಫಾರ್ಮ್ ಧರಿಸಿಕೊಂಡು ಅಡ್ಡಾಡುತ್ತಿದ್ದ. ಪ್ರತೀ ದಿನ ಬೈಕ್‌ನಲ್ಲೇ ಕಾರವಾರ, ಸೌತ್ ಗೋವಾ ಓಡಾಡುತ್ತಿದ್ದ ಈತ, ಒಬ್ಬರಿಂದ 66,000 ರೂ., ಇನ್ನೊಬ್ಬರಿಂದ 35,000 ರೂ. ಸೇರಿದಂತೆ ಹಲವರಿಂದ ಹಣ ಪಡೆದು ಪಂಗನಾಮ ಹಾಕಿದ್ದ. ಒಬ್ಬರಿಂದಂತೂ 4 ಲಕ್ಷ ರೂ. ಪಡೆದು, ಕೊನೆಗೆ ವಾಪಾಸ್ ನೀಡಿದ್ದ ಎನ್ನಲಾಗಿದೆ.

ಕಡವಾಡದ ಮಾರುತಿ ನಗರದ ಹೇಮಲತಾ ಎಂಬುವವರ ಪುತ್ರ ಪ್ರಸಾದ್ ಎಂಬಾತನಿಗೆ ನೇವಿಯಲ್ಲಿ ಜವಾನ ಹುದ್ದೆ ಕೊಡಿಸುವುದಾಗಿ 35,000ರೂ. ಪಡೆದು ಈತ ಮೋಸ ಮಾಡಿದ್ದ. ಕಳೆದ ಒಂದೆರಡು ವಾರಗಳಿಂದ ಈತನ ಮೇಲೆ ನಿಗಾಯಿರಿಸಿದ್ದ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು, ಗೌಂಡ್ ವರ್ಕ್ ಮಾಡಿದಾಗ ಹಾಗೂ ಕಾರವಾರ ಪೊಲೀಸರ ಜಂಟಿ ಕಾರ್ಯಾಚರಣೆ
ಮೂಲಕ ಆರೋಪಿಯನ್ನು ಬಂಧಿಸಲಾಗಿದೆ.

RELATED ARTICLES  ಮನಸೂರೆಗೊಳಿಸುವ ಚಿತ್ರಗಳನ್ನು ಬಿಡಿಸುವ ಅಪ್ರತಿಮ ಚಿತ್ರ ಕಲಾವಿದ ಸಚಿನ್

ಆರೋಪಿಯ ಮನೆಯಲ್ಲಿ ಹುಡುಕಾಡಿದಾಗ 66,000ರೂ. ನಗದು ಲಭ್ಯವಾಗಿದೆ. ಆರೋಪಿ ಮಾಡಿರುವ ಮೋಸ ತಿಳಿದು ವಂಚನೆಗೊಳಗಾಗಿದ್ದ ಹೇಮಲತಾ ಕಾರವಾರ ಇವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿಯಾದ ವಿನಾಯಕ ಬೆಳಗಾವಿ
ಕಮಾಂಡೋ ಟ್ರೈನಿಂಗ್ ಸ್ಕೂಲ್‌ನಲ್ಲಿ ಚಿಕ್ಕಪುಟ್ಟ ಕೆಲಸಕ್ಕೆ ಸೇರಿಕೊಂಡಿದ್ದ. ಮರಾಠಾ ಲೈಟ್ ಇನ್‌ಫೆಂಟ್ರಿ ವಿಭಾಗದಡಿ ಹೆಲ್ಸಿಂಗ್ ಬಾಯ್ ಆಗಿ ಸ್ವೀಪಿಂಗ್ ಮುಂತಾದ ಕೆಲಸ
ಮಾಡ್ತಿದ್ದ. ಅಲ್ಲೇ ಅಧಿಕಾರಿಗಳ ರ್ಯಾಂಕಿಂಗ್, ಅವರ ಯೂನಿಫಾರ್ಮ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆರೋಪಿ,ನಂತರ ಆ ಕೆಲಸವನ್ನು ಬಿಟ್ಟು 2015- 16ರ ವೇಳೆ ಆರ್ಮಿ
ಆಫಿಸರ್ ಯೂನಿಫಾರ್ಮ್ ಖರೀದಿಸಿದ್ದ. 2020ರಿಂದ ತಾನು ಆರ್ಮಿ ಅಧಿಕಾರಿ ಎಂದು ಹೇಳಿಕೊಂಡು ಅಡ್ಡಾಡ್ತಿದ್ದ ಎನ್ನಲಾಗಿದೆ.

RELATED ARTICLES  ಹೊನ್ನಾವರ ಜಾತ್ರಗೆ ಹೋದವನು, ನಾಪತ್ತೆ. ಹುಡುಕಿದಾಗ ಸಿಕ್ಕಿದ್ದು ಶಾಕಿಂಗ್ ನ್ಯೂಸ್.

ಕೊನೆಗೂ ಈತನನ್ನು ಜಾಲ ಬೀಸಿ ಹೆಡೆಮುರಿ
ಕಟ್ಟುವಲ್ಲಿ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರವಾರ ಹಾಗೂ ಗೋವಾ ಭಾಗದಲ್ಲಿ
ಹಲವರಿಗೆ ಈತ ಮೋಸ ಮಾಡಿರುವುದು ಮಾಹಿತಿ ಹೊರಬಿದ್ದಿದೆ ಎಂದು ವರದಿಯಾಗಿದೆ.