ಕುಮಟಾ : ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಉತ್ತರಪ್ರದೇಶ ಮೂಲದ ಇಬ್ಬರು ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಕುಮಟಾ ಪಟ್ಟಣದ ಬಗ್ಗೋಣ ಶಾಲೆ ಸಮೀಪದಲ್ಲಿ ನಡೆದಿದೆ. ರಸ್ತೆ ಪಕ್ಕದಲ್ಲಿ ಇಬ್ಬರು ಯುವಕರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣ ಯುವಕರನ್ನು ವಿಚಾರಿಸಲು ಸ್ಥಳೀಯರು ಮುಂದಾಗುತ್ತಿದ್ದಂತೆ ಈ ಇಬ್ಬರು ಯುವಕರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆಗ ಸ್ಥಳೀಯರು ಆ ಯುವಕರನ್ನು ಹಿಂಬಾಲಿಸಿದ್ದಾರೆ.

RELATED ARTICLES  ಕೊಲೆಯಲ್ಲಿ ಅಂತ್ಯವಾದ ಆಸ್ತಿ ಜಗಳ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.

ಎಲ್ಲರೂ ಉತ್ತರ ಪ್ರದೇಶದವರು ಎಂದು ತಿಳಿದ ತಕ್ಷಣ ಏನೋ ಅಪರಾಧ ಕೃತ್ಯವೆಸಗಲೆಂದೇ ಇಲ್ಲಿಗೆ ಬಂದಿರಬೇಕೆಂದು ತಪ್ಪಾಗಿ ಅರ್ಥೈಸಿಕೊಂಡು ಯುವಕರನ್ನು ಹಿಡಿದು ಗೂಸಾ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ವಶಕ್ಕೆ ಪಡೆದು, ಅವರ ಬಳಿಯಿದ್ದ ಮೊಬೈಲ್‌ನ್ನು ಪರಿಶೀಲಿಸಿದಾಗ, ಇಲ್ಲಿನ‌ ಯುವತಿಯರೊಡನೆ ಈ ಯುವಕರಿಗೆ ಪ್ರೇಮಾಂಕುರವಾಗಿರುವುದು ತಿಳಿದುಬಂದಿದೆ.

RELATED ARTICLES  ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಂ

ಯುವತಿಯರ ಜೊತೆಗಿರುವ ಪೋಟೊ ಕೂಡ ಅವರ ಮೊಬೈಲ್‌ನಲ್ಲಿದೆ. ಈ ಯುವತಿಯರೇ ಆ‌ ಯುವಕರನ್ನು ಇಲ್ಲಿಗೆ ಕರೆಯಿಸಿದ್ದರಂತೆ. ರೈಲಿನ ಮೂಲಕ ಕುಮಟಾಕ್ಕೆ ಬಂದ ಯುವಕರು ಯುವತಿಯರನ್ನು ಭೇಟಿ ಮಾಡಿ, ಹಲವು
ಪೋಟೊಗಳನ್ನು ತೆಗೆದುಕೊಂಡಿರುವುದು ತಿಳಿದುಬಂದಿದೆ. ಹಾಗಾಗಿ ಯುವತಿಯರ ಪಾಲಕರನ್ನು ಪೊಲೀಸ್ ಠಾಣೆಗೆ ಕರೆಯಿಸಿದ ಅಧಿಕಾರಿಗಳು, ವಿಚಾರಣೆ ಕೈಗೊಂಡಿರುವುದು
ತಿಳಿದುಬಂದಿದೆ.