ಮಧುಮೇಹಿಗಳಿಗೆ ಲೆಮನ್ ಓಟ್ಸ್ ರೆಸಿಪಿ ತಯಾರಿಕೆ ಹಾಗೂ ಇನ್ನಿತರ ಮಾಹಿತಿ ಇಲ್ಲದೆ ಓದಿ.
ಬೇಕಾಗುವ ಪದಾರ್ಥಗಳು
ಓಟ್ಸ್ 1 ಕಪ್
ನೀರು ಅರ್ಧ ಕಪ್
ನಿಂಬೆ ರಸ 1 ಚಮಚ ಚಿಟಿಕೆಯಷ್ಟು ಅರಿಶಿಣ ಪುಡಿ
ಸಾಸಿವೆ ಅರ್ಧ ಚಮಚ
ಬೇಳೆ 1 ಚಮಚ
ಹಸಿ ಮೆಣಸಿನಕಾಯಿ 2,
1ಒಣ ಮೆಣಸು
ಎಣ್ಣೆ ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಕಡಲೆ ಬೇಳೆಯನ್ನು ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಹಸಿ ಮೆಣಸಿನಕಾಯಿ, ಒಣ ಮೆಣಸು, ಕರಿ ಬೇವಿನ ಎಲೆ ಹಾಕಿ, ಚಿಟಕೆಯಷ್ಟು ಇಂಗು ಹಾಕಿ, ಒಮ್ಮೆ ಸೌಟ್ ನಿಂದ ಆಡಿಸಿ.
ಈಗ ಅದಕ್ಕೆ ಅರಿಶಿಣ ಪುಡಿ ಹಾಕಿ, ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ. ನೀರು ಕುದಿಯಲಾರಂಭಿಸಿದಾಗ ಓಟ್ಸ್ ಹಾಕಿ ಮಿಕ್ಸ್ ಮಾಡಿ ಸಾಧಾರಣ ಉರಿಯಲ್ಲಿ ಬೇಯಿಸಿ.
ಓಟ್ಸ್ ಬೆಂದ ನಂತರ ಅದನ್ನು ಉರಿಯಿಂದ ಇಳಿಸಿ, ನಿಂಬೆ ರಸ ಹಿಂಡಿದರೆ ರುಚಿಯಾದ ಓಟ್ಸ್ ಸವಿಯಲು ರೆಡಿ.