ಹೊನ್ನಾವರ : ತಾಲೂಕಿನಲ್ಲಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆ ಹಾಗೂ ಅಳ್ಳಂಕಿಯಸ್ವಂದನ ಸಮಾಜ ಸೇವಾ ಬಳಗ; ಕರಾವಳಿ ಮೀನುಗಾರ ಕಾರ್ಮಿಕರ ಮತ್ತು ಪರ್ಸಿನ ಬೋಟ ಮಾಲೀಕರ ಸಂಘದ ನೇತ್ರತ್ವದಲ್ಲಿ ಕಾಸರಕೋಡ ಗ್ರಾಮ ಪಂಚಾಯತ ಮತ್ತು ವಿವಿಧ ಸ್ಥಳೀಯ ಮೀನುಗಾರ ಸಂಘಟನೆಗಳ, ಇನ್ ವಾಯಸ್, ಟ್ಯಾಗ್ ಸ್ಕಿಲ್ ಮುಂತಾದವರ ಸಹಯೋಗದಲ್ಲಿ ನವೆಂಬರ್ 13 ಭಾನುವಾರ ಬೆಳಿಗ್ಗೆ 9.00 ಕ್ಕೆ ತಾಲೂಕಿನ ಕಾಸರಕೋಡಿನ ಸ್ನೇಹಕುಂಜದ ವಿವೇಕಾನಂದ ಆರೋಗ್ಯಧಾಮದಲ್ಲಿ ಮಂಗಳೂರಿನ ಏಜೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗಳ ನುರಿತ ತಜ್ಞ ವೈದ್ಯರ ತಂಡದಿಂದ, ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸ್ಪಂದನ ಸಮಾಜ ಸೇವಾ ಬಳಗದ ಅಧ್ಯಕ ಚಂದ್ರಕಾಂತ ಕೊಚರೇಕರ ಇಲ್ಲಿಪತ್ರಿಕಾ ಪ್ರಕಟನೆ ಬಿಡುಗಡೆಗೊಳಿಸಿ ತಿಳಿಸಿದರು.

RELATED ARTICLES  ನಾಳೆ SSLC ರಿಸಲ್ಟ್..!

ಅಂದಿನ ಶಿಬಿರದಲ್ಲಿ

  • ಸಾಮಾನ್ಯ ಆರೋಗ್ಯ ತಪಾಸಣೆ, *ಮಕ್ಕಳ ಆರೋಗ್ಯ ತಪಾಸಣೆ , *ಹೃದಯ ಸಂಬಂದಿಕಾಯಿಲೆ,ಕಣ್ಣಿನ ತಪಾಸಣೆ, ಸಂದು ವಾತ-ಎಲುಬು ಮತ್ತುಕೀಲುರೋಗ, ಚರ್ಮ ರೋಗ, ಕಿವಿ ಮೂಗು ಮತ್ತು ಗಂಟಲು ತಪಾಸಣಿ(ENT), *ಮುತ್ರಾಂಗ ರೋಗ ತಪಾಸಣೆಗೆ ಅವಕಾಶವಿರುತ್ತದೆ. ದಂತ ವೈದ್ಯಕೀಯ ಆಸ್ಪತ್ರೆಯ ವೈದ್ಯರು ದಂತ ತಪಾಸಣೆಯೊಂದಿಗೆ ಚಿಕಿತ್ಸೆಯನ್ನು ಸಹ ನೀಡುತ್ತಾರೆ.

*ಶಿಬಿರದಲ್ಲಿ ಇಸಿಜಿ ಮತ್ತು ಮಧುಮೇಹ/ ಸಕ್ಕರೆ ಕಾಯಿಲೆ ಪರಿಕ್ಷೆ , ಮತ್ತು ಔಷಧಿ ಉಚಿತವಾಗಿರುತ್ತದೆ. ಅಗತ್ಯ ಇರುವ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕವನ್ನು ಸಹ ವಿತರಿಸಲಾಗುವದು. ಹಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರೂ ಅದನ್ನು ಗುರುತಿಸಲಾಗದೇ ಕಾಯಿಲೆಗಳ ಬಗ್ಗೆ ನಿರ್ಲಕ್ಷ ಮಾಡುತ್ತಾರೆ. ಆದರೆ ಕಾಯಿಲೆ ಉಲ್ಬಣಗೊಂಡ ನಂತರ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಸ್ಥಳೀಯ ಆಸ್ಪತ್ರೆಗಳು ಕೊನೆಯ ಕ್ಷಣದಲ್ಲಿ ಮಂಗಳೂರು ಉಡುಪಿಯತ್ತ ಬೆರಳು ತೋರುವ ಸಂದರ್ಭಗಳೇ ಹೆಚ್ಚು. ಆದ್ದರಿಂದ 40 ವಯಸ್ಸು ದಾಟಿದ ಮೇಲೆ 2 ವರ್ಷಕ್ಕೆ ಒಮ್ಮೆಯಾದರು ಎಲ್ಲರೂ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡರೆ ಎಷ್ಟೋ ಜನರು ಸಾವಿನ ದವಡೆಯಿಂದ ಪಾರಾಗಬಹುದು ಎನ್ನುವ ಸಾರ್ವಜನಿಕ ಹಿತದೃಷ್ಠಿಯಿಂದ ಇಂತಹ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗುತ್ತಿದೆ. ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ಇಂತಹ ಶಿಬಿರಗಳಿಂದ ಅನುಕೂಲವಾಗುವದು. ಆದ್ದರಿಂದ
ಸಾರ್ವಜನಿಕರು ಈ ಶಿಬಿರದ ಲಾಭ ಪಡೆದುಕೊಳ್ಳಬೇಕೆಂದು ಇಲ್ಲಿನ ಸ್ಪಂದನ ಸಮಾಜ ಸೇವಾ ಬಳಗದ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ತಿಳಿಸಿದ್ದಾರೆ. ಅವರು ಇಲ್ಲಿನ ಕಾಸರಕೋಡಗ್ರಾಮ ಪಂಚಾಯತಿ ಕಛೇರಿಯಲ್ಲಿ ಗ್ರಾ.ಪಂ.ಅಧ್ಯಕ್ಷ ಮಂಜು ಗೌಡ, ವಿವಿಧ ಮೀನುಗಾರ ಸಂಘಟನೆಗಳ ಜಂಟಿ ಸಮೀತಿಯ ಅಧ್ಯಕ್ಷ ರಾಜೇಶ ತಾಂಡೇಲ , ಮತ್ತಿತರರ ಉಪಸ್ಥಿತಿಯಲ್ಲಿ ಶಿಬಿರದ ಕರ ಪತ್ರಗಳ ಮಾದರಿಯೊಂದಿಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹಮಜಾ ಪಟೇಲ, ಗಣಪತಿ ತಾಂಡೇಲ, ಪ್ರೀತಿ ತಾಂಡೇಲ, ಜಗದೀಶ ತಾಂಡೆಲ ಇನ್ನು ಮುಂತಾದವರು ಉಪಸ್ಥಿತರಿದ್ದರು

RELATED ARTICLES  Job Wanted