ಶಿರಸಿ : ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು ಕಂಡ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹೊರವಲಯದಲ್ಲಿರುವ ಎಸಳೆ ಕೆರೆಯಲ್ಲಿ ಇಂದು ಸಂಜೆ ನಡೆದಿದೆ ಎಂದು ವರದಿಯಾಗಿದೆ. ಸಮೀಪದ ಕಸ್ತೂರಬಾ ಶಾಲೆಯಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದರು. ಇಂದು ಶಾಲೆ ಬಿಟ್ಟ ಶಾಲೆ ನಂತರ ನಾಲ್ಕು ಜನರ ಆಟವಾಡಲು ಕೆರೆಯ ಬಳಿ ತೆರಳಿದ್ದಾಗ ಇಬ್ಬರು ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಇಂದು ಶನಿವಾರವಾದ ಕಾರಣ ಅರ್ಧ ದಿನ ಶಾಲೆಗೆ ರಜೆಯ ದಿನವಾಗಿದ್ದು ಮಕ್ಕಳು ಈ ಸಂದರ್ಭದಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ.

RELATED ARTICLES  ಸಿಲೆಂಡರ್ ಸ್ಪೋಟ : ಬೆಳ್ಳಂಬೆಳಗ್ಗೆ ನಡೆದೋಯ್ತು ಅವಘಡ

ಕಸ್ತೂರಬಾ ನಗರದ (ಕಸ್ತೂರಬಾ ನಗರ) ಅಹ್ಮದ್ ರಾಜಾಕ್ ಜನ್ನಿಗೇರಿ (14), ಇಮಾಮ್ ಖಾಸಿಮ್ ರಿಯಾಜ್ ಪಾಳಾ (14) ಮೃತ ಬಾಲಕರಾಗಿದ್ದು , ಅಗ್ನಿಶಾಮಕ ದಳದವರು ಹಾಗೂ ಪೊಲೀಸ್
ಸಬ್ಬಂದಿ ಶವವನ್ನು ಮೇಲೆತ್ತಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯ ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಊರಿನಲ್ಲಿ ಸ್ಮಶಾನ ಮೌನ ಆವರಿಸಿದ.

RELATED ARTICLES  ಟಿವಿ ನೋಡುತ್ತಿರುವಾಗಲೇ ನಿದ್ರೆಗೆ ಜಾರುತ್ತೀರಾ? ಇದು ನಿಮಗೆ ವಯಸ್ಸಾಗುತ್ತಿರುವ ಲಕ್ಷಣ