ಹೊನ್ನಾವರ: ಹೊನ್ನಾವರ ತಾಲೂಕಿನ ಅರೇಅಂಗಡಿ – ನಿಲ್ಕೋಡ ಸಮೀಪದ ತೊಟ್ಟಿಲಗುಂಡಿಯಲ್ಲಿ ಸಹೋದರರ ನಡುವೆ ಆಸ್ತಿ ವಿಷಯಕ್ಕೆ ಅಣ್ಣನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.ಮನೆಯ ಆಸ್ತಿ ವಿಷಯಕ್ಕೆ ಆಗಾಗ ಸಹೋದರರ ನಡುವೆ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತೆರಳಿದೆ. ಮಾತಿಗೆ ಮಾತು ಬೆಳೆದು ಕೈ ಕೈ‌ಮಿಲಾಯಿಸಿಕೊಂಡು ವಿನಾಯಕ ನಾಯ್ಕ ಮತ್ತು ಚಿದಾನಂದ ನಾಯ್ಕ ಎನ್ನುವವರು ಅಣ್ಣನಾದ ಹನುಂಮತ ನಾಯ್ಕ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

RELATED ARTICLES  ಬೈಕ್ ಅಪಘಾತ: ಪರಮೇಶ್ವರ ಹೆಗಡೆ ಸಾವು

ಆಸ್ತಿಗಾಗಿ ಹತ್ಯೆ ನಡೆಯುವಂತಹ ಪ್ರಕರಣಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ವರದಿಯಾಗುತ್ತಿದ್ದಾದರೂ ಉತ್ತರ ಕನ್ನಡದಲ್ಲಿ ಕಡಿಮೆ ಎಂದೇ ಹೇಳಬಹುದು. ಆದರೆ ಇಂತಹ ಘಟನೆಯೊಂದು ಇದೀಗ ಇಡೀ ಉತ್ತರ ಕನ್ನಡದ ಜನರನ್ನೇ ಬೆಚ್ಚಿ ಬೆಳೆಸಿದೆ.

ತಲೆ ಭಾಗಕ್ಕೆ ಗಂಭೀರವಾಗಿ ಗಾಯವಾದ ಪರಿಣಾಮ ಹನುಮಂತ ಹೊನ್ನಪ್ಪ ನಾಯ್ಕ್(54) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮೃತರ ಸೋದರ ಮಾವ ಮಾರುತಿ ನಾಯ್ಕ್ (70)ಗೆ ಗಂಭೀರ ಗಾಯಗೊಂಡಿದ್ದಾರೆ.

RELATED ARTICLES  ಗೋಕರ್ಣಕ್ಕೆ ಬಂದು ಪಿತೃಕಾರ್ಯ ಮಾಡಿದ ಮುಸ್ಲಿಂ ಕುಟುಂಬ : ಆಶ್ಚರ್ಯಕರ ಘಟನೆಗೆ ಸಾಕ್ಷಿಯಾದ ಕ್ಷೇತ್ರ.

ಹಲ್ಲೆ ಮಾಡಿ ಕೊಲೆಗೆ ಕಾರಣರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ್ ಪತ್ತೆಗೆ ಹೊನ್ನಾವರ ಪೊಲೀಸರು ಮುಂದಾಗಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.