ಶಿರಸಿ : ಕಳ್ಳತನ ಮಾಡುವವರು ಯಾವೆಲ್ಲ ರೀತಿಯಲ್ಲಿ ಬಂದು ವಸ್ತುಗಳನ್ನು ಎಗರಿಸುತ್ತಾರೆ ಎನ್ನುವುದು ಯಾರಿಗೂ ತಿಳಿಯದ ವಿಚಾರ, ಮನೆ ದೇವಾಲಯ ಹಾಗೂ ಇನ್ನಿತರ ಕಡೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಕದೀಮರು ಇದೀಗ ನಿಲ್ಲಿಸಿಟ್ಟ ಅಂಬುಲೆನ್ಸ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿರುವ ವರದಿಯಾಗಿದೆ. ಪಿಡಬ್ಲುಡಿ ಆವರಣದಲ್ಲಿ ನಿಲ್ಲಿಸಿಡಲಾಗಿದ್ದ 108 ಅಂಬ್ಯುಲೆನ್ಸ್ ನ ಸುಮಾರು 1.58 ಲಕ್ಷ ರೂ ಬೆಲೆಯ ವೆಂಟಿಲೇಟರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕದ್ದೊಯ್ದ ಘಟನೆ ನಡೆದಿದೆ.

RELATED ARTICLES  ಪ್ರವಾಹದ ಅನಾಹುತಕ್ಕೆ ಸ್ಪಂದಿಸದ ಕೇಂದ್ರ ಸರ್ಕಾರ : ಕುಮಟಾದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ.

ಈ ವಾಹನವು ಶ್ರದ್ದಾನಂದ ಗಲ್ಲಿಯ ಅಕ್ಷಯ ರಾಮಚಂದ್ರ ಮೆಡಿಕಲ್ ಟೆಕ್ನಿಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಬುಲೆನ್ಸ್ ವಾಹನವಾಗಿದೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿಯೂ ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ ? ಇಂದಿನ ಘಟನಾವಳಿಗಳು ಏನು?