ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ತ್ರಿಪುರಾಖ್ಯ ದೀಪೋತ್ಸವ ನ.7 ರಂದು ಸಂಜೆ 6 ಗಂಟೆಯಿಂದ ನಡೆಯಲಿದ್ದು, ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ‌ ಪಾಲ್ಗೊಳ್ಳುವಂತೆ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.

ಸ್ವರ್ಣವಲ್ಲೀ‌ ಶ್ರೀಗಳ ವೃಕ್ಷ ಮಂತ್ರಾಕ್ಷತೆ ಶ್ರೀ ಲಕ್ಷ್ಮೀ ನರಸಿಂಹ ದೇವರ ಸನ್ನಿಧಾನದಲ್ಲಿ ಶ್ರೀಗಳ‌ ಸಾನ್ನಿಧ್ಯದಲ್ಲಿ ದೀಪೋತ್ಸವ ನಡೆಯಲಿದೆ‌. ಅಯುತ 10 ಸಹಸ್ರ ಸಂಖ್ಯೆಯಲ್ಲಿ ತ್ರಿಪುರಾಖ್ಯ ದೀಪೋತ್ಸವ ಜರುಗಲಿದೆ. ಸಂಜೆ 6 ರಿಂದ ಶ್ರೀದೇವರ ಮಹಾಮಂಗಳಾರತಿ, ದೀಪೋತ್ಸವ, ಪ್ರಸಾದ ವಿತರಣೆ ನಡೆಯಲಿದೆ. ಮರುದಿನ ನ.8 ರಂದು ಗ್ರಹಣ‌ ಇರುವದರಿಂದ ದೀಪೋತ್ಸವ ಒಂದು ದಿನ ಮೊದಲೇ ನಡೆಸಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ತಿಳಿಸಿದ್ದಾರೆ.

RELATED ARTICLES  ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9 ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸೆಪ್ಟೆಂಬರ್ 3ಕ್ಕೆ