ಕಾರವಾರ: ದೋಬಿಘಾಟ ರಸ್ತೆಯ ದೈವಜ್ಞ ಬ್ರಾಹ್ಮಣ ಕಲ್ಯಾಣ ಮಂಟಪದ ಹತ್ತಿರ ಮಹೇಂದ್ರಾ ಗೂಡ್ಸ್ ವಾಹನದಲ್ಲಿ ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಶಹರ ಠಾಣಾ ಪೊಲೀಸರು ದಾಳಿ ನಡೆಸಿ ಅಕ್ರಮ ಸರಾಯಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ವಾಹನ ಹಾಗೂ ವಾಹನದಲ್ಲಿದ್ದ ಮದ್ಯವನ್ನು ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ದಾಳಿಯ ಸಮಯದಲ್ಲಿ 3,09,600 1 ರೂ. ಬೆಲೆಯ ಲೈಟ್ ಹಾರ್ಸ್
ಪ್ರಿಮೀಯಂ ಬ್ಲೆಂಡೆಡ್ ಮಾಲ್ಟ್ ಎಸ್ಕಿ 750 ಎಂಎಲ್‌ನ 1548 ಬಾಟಲಿಗಳು, 2.88,000 ರೂ. ಬೆಲೆಯ ಗೋವಾ ಸ್ಪೆಶಿಯಲ್ ಪಾಮ್ ಫೆನ್ನಿ, ಕೋಕೋನೆಟ್ ಫೆನ್ನಿ 750 ಎಂ.ಎಲ್.ನ 1440 ಬಾಟಲಿಗಳು, 1,44,000 ರೂ. ಮೌಲ್ಯದ ಗೋವಾ 77 ಡಿಲಕ್ಸ್ ಕ್ಯಾಲ್ಯೂ ಫೆನ್ನಿ 750 ಎಂ.ಎಲ್.ನ 72 ಬಾಟಲಿಗಳು, 19,200
ರು. ಬೆಲೆಯ ಮೆಕ್‌ಡೊವೆಲ್ ನಂ. 1 ರಿಸರ್ವ್ ವಿಸ್ಕಿಯ 192 ಬಾಟಲಿಗಳು, 14,400 ರು. ಬೆಲೆಯ ಓಲ್ಡ್ ಮೊಂಕ್‌ನ 144 ಬಾಟಲಿಗಳು, 26,400 ರೂ. ಮೌಲ್ಯದ ಕಿಂಗ್ ಫಿಶರ್ ಸ್ಟಾಂಗ್ ಪ್ರಿಮಿಯಂ ಬಿಯರ್‌ನ 264 ಟನ್‌ಗಳು ಹಾಗೂ ಮದ್ಯ ಸಾಗಾಟಕ್ಕೆ ಬಳಸಿದ 4 ಲಕ್ಷ ರೂ. ಮೌಲ್ಯದ ಮಹೇಂದ್ರ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ರಾಜ್ಯೋತ್ಸವದ ದಿನ ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ