ಗೋಕರ್ಣ : ಉತ್ತರಕನ್ನಡದ ಬೇರೆ ಬೇರೆ ತಾಲೂಕುಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಭಯದ ವಾತಾವರಣ ಇರುವ ಈ ಸಂದರ್ಭದಲ್ಲಿಯೇ, ಇದೀಗ ಗೋಕರ್ಣದ ಕೊಡ್ಲೆ ಸಮೀಪ ಚಿರತೆಯೊಂದು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಸುತ್ತಮುತ್ತಲ ಜನರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ನಾಯಿ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿಯ ಪ್ರಕರಣಗಳು ಹಸಿಯಾಗಿರುವಾಗಲೇ, ಚಿರತೆ ಕಾಣಿಸಿಕೊಂಡಿದ್ದು ಮುಂದೆ ಎಂತಹ ಅನಾಹುತ ಕಾದಿದೆಯೋ? ಎಂಬ ಯೋಚನೆ ಜನರ ಮನಸ್ಸಿನಲ್ಲಿ ಮೂಡಿದೆ.

RELATED ARTICLES  ಟಿವಿ ನೋಡುತ್ತಿರುವಾಗಲೇ ನಿದ್ರೆಗೆ ಜಾರುತ್ತೀರಾ? ಇದು ನಿಮಗೆ ವಯಸ್ಸಾಗುತ್ತಿರುವ ಲಕ್ಷಣ

ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾದ ಚಿರತೆಯ ಫೋಟೋ ಸಕ್ಕತ್ ವೈರಲ್ ಆಗಿದೆ. ಗೋಕರ್ಣದ ಕೂಡ್ಲೆ ಸಮೀಪದ ಗೋಗರ್ಭದ ಗುಡ್ಡದಮೇಲೆ ಚಿರತೆ ಕಾಣಿಸಿಕೊಂಡಿದೆ‌ ಎಂಬ ಬಗ್ಗೆ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ. ಚಿರತೆಯಿಂದ ಅನಾಹುತವಾಗದಂತೆ ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

RELATED ARTICLES  ಪುನೀತನ ಜೊತೆ ಕುಳಿತ ಗಣಪ : ವಿಭಿನ್ನ ಕಲ್ಪನೆಗೆ ಜನ ಮೆಚ್ಚುಗೆ

ಮತ್ತೆ ಮತ್ತೆ ಬೇರೆ ಬೇರೆ ಭಾಗಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಹೊನ್ನಾವರ ತಾಲೂಕಿನಲ್ಲಿಯೂ ಈ ಹಿಂದೆ ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಿತ್ತು. ತದನಂತರದಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡಿದ ಪ್ರಕರಣವು ವರದಿಯಾಗಿತ್ತು.