ಭಟ್ಕಳ : ಅಪಘಾತವಾದಾಗ ಬಲವಾದ ಪೆಟ್ಟುಬಿದ್ದು ಸಾಯುವ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಅಪಘಾತದಿಂದಾಗಿ ಭಯಪಟ್ಟ 14 ರ ಹರೆಯದವನೊಬ್ಬ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಬಾಲಕನೋರ್ವ ತನ್ನ ಕೆಲಸಕ್ಕಾಗಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈತನ ಬೈಕ್ ಬೇರೊಬ್ಬರ ಬೈಕ್ ಗೆ ಡಿಕ್ಕಿಯಾಗಿದೆ ಆ ಸಂದರ್ಭದಲ್ಲಿ, ಈತ ಚಲಾಯಿಸುತ್ತಿದ್ದ ಬೈಕ್ ಕೆಳಗೆ ಬಿದ್ದಿದ್ದು, ಬೈಕನ್ನು ಎತ್ತಿ ನಿಲ್ಲಿಸುವ ವೇಳೆ ಜನರು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಯುವಕನಲ್ಲಿ ಭಯ ಹುಟ್ಟಿಸಿದೆ.
ಘಟನೆಯಲ್ಲಿ ಹೆದರಿಕೊಂಡ ಬಾಲಕ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಆಗಲೇ ಮೃತಪಟ್ಟಿದ್ದ. ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ ಅಬ್ದುಲ್ಲಾ ಆಫ್ರಿಕಾ (14) ಮೃತಪಟ್ಟ ವಿದ್ಯಾರ್ಥಿ. ಮೃತ ವಿದ್ಯಾರ್ಥಿಯ ತಂದೆ ಸೌದಿ ಅರೆಬಿಯಾದಲ್ಲಿ ಉದ್ಯೋಗಿಯಾಗಿ ಎಂದು ತಿಳಿದುಬಂದಿದೆ. ಬಾಲಕ ಯಾವ ಕಾರಣಕ್ಕಾಗಿ ಹೊರಟಿದ್ದ ಹಾಗೂ ಘಟನೆ ಸಂಬಂಧ ಪೊಲೀಸರಿಂದ ತನಿಖೆ ನಡೆಯಬೇಕಿದೆ.