ಕಾರವಾರ: ಚಲಿಸುತ್ತಿದ್ದ ಬೈಕ್ ಒಂದಕ್ಕೆ ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದು ಬೈಕ್ ನ ಮೇಲೆ ಕುಳಿತಿದ್ದವನ ಕಾಲಿನ ಮೇಲೆ ಹರಿದು ಹೋದ ದುರ್ಘಟನೆ ನಗರದ ಮಯೂರ ವರ್ಮ ವೇದಿಕೆಯ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಚಲಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಟ್ರಕ್ ಡಿಕ್ಕಿಪಡಿಸಿ ಕಾಲಿನಮೇಲೆ ಹರಿದುಹೋಗಿದೆ. ಇದರಿಂದಾಗಿ ಕಾರವಾರ ತಾಲೂಕಿನ ಸದಾಶಿವಗಡ
ಮೂಲದ ಗಜಾನನ ಪೈ ಎಂಬುವವರಿಗೆ ಬಲವಾದ ಪೆಟ್ಟುಬಿದ್ದ ಬಗ್ಗೆ ವರದಿಯಾಗಿದೆ.
ಶುಭಂ ಗಜಾನನ ಪೈ ಅವರು ತಮ್ಮ ತಂದೆ ಗಜಾನನ ಪೈ ಅವರನ್ನು ಬೈಕ್ ನಲ್ಲಿ ಕೂರಿಸಿಕೊಂಡು ಸದಾಶಿವಗಡದ ಕಡೆಗೆ ತೆರಲುವಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹೆದ್ದಾರಿಯಲ್ಲಿ ರಸ್ತೆ ತಡೆ ಕಾಣಿಸಿದ್ದು ಬೈಕ್ ನ ವೇಗ ಕಡಿಮೆ ಮಾಡಿದ್ದಾರೆ. ಈ ವೇಳೆ ಹಿಂಬದಿಯಿಂದ ಟ್ರಕ್ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಘಾತದಲ್ಲಿ ಕೆಳಗೆ ಬಿದ್ದ ಗಜಾನನ ಪೈ ಅವರ ಕಾಲಿನ ಮೇಲೆ ಟ್ರಕ್ ಹರಿದಿದ್ದು ಗಭೀರವಾಗಿ ಗಾಯವಾಗಿದೆ ಎನ್ನಲಾಗಿದೆ.
ಟ್ರಕ್ ಚಾಲಕ ಅಪಘಾತಪಡಿಸಿ ಟ್ರಕ್ಕನ್ನು ನಿಲ್ಲಿಸದೇ ಗೋವಾ ಕಡೆಗೆ ತೆರಳಿದ್ದು ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳಿಯಾಳ ಮೂಲದ ಮೌಲಾನ ಮಕಂದರ್ ಅಪಘಾತ ಪಡಿಸಿದ ಟ್ರಕ್ ಚಾಲಕನಾಗಿದ್ದಾನೆ.
ಅಪಘಾತವಾಗಿ ಅರ್ಧ ಗಂಟೆಗೂ ಅಧಿಕ ಕಾಲಾದರೂ 108 ಅಂಬ್ಯುಲೆನ್ಸ್ ಬರದೇ ಗಾಯಳು ನರಳಾಡಿದ್ದಾರೆ ಎಂದು ವರದಿಯಾಗಿದ್ದು .ಸ್ಥಳೀಯರು
108ಕ್ಕೆ ಕರೆ ಮಾಡಿದರೇ, ಗ್ರಾಮೀಣ ಭಾಗಕ್ಕೆ ತೆರಳಿದೆ ಎನ್ನುವ ಉತ್ತರ ಸಿಕ್ಕಿದೆ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರಿಂದ ಬೇಸರದ ಮಾತುಗಳು ಕೇಳಿಬಂದಿದೆ.