ಕುಮಟಾ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಪಾಂಡುರಂಗ ಹೊಟೆಲ್ ಎದುರಿನ ಪೆಟ್ರೋಲ್ ಬಂಕ್’ಗೆ ತೆರಳುತ್ತಿದ್ದ ಇನೋವಾ ಕಾರಿಗೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. ತಾಲೂಕಿನ ದೀವಗಿ ನಿವಾಸಿಗಳಾದ ನಾಗರಾಜ ದೇಶಭಂಡಾರಿ ಹಾಗೂ ಜಗದೀಶ ದೇಶಭಂಡಾರಿ ಗಾಯಗೊಂಡ
ಬೈಕ್ ಸವಾರರು ಎಂದು ತಿಳಿದುಬಂದಿದೆ.

RELATED ARTICLES  ಕ್ಯಾಸಲ್ ರಾಕ್ ಬಳಿ ಗುಡ್ಡ ಕುಸಿತ : ಗೋವಾಕ್ಕೆ ತೆರಳುವ ರೈಲುಗಳು ಬಂದ್.!

ಅಳ್ವೆಕೋಡಿ ಚರ್ಚ್‌ಲ್ಲಿ ಮದುವೆ ಮುಗಿಸಿ ಕತಗಾಲ ಕಡೆ ಸಾಗುತ್ತಿದ್ದ ಇನೋವಾ ಕಾರ್ ಪಾಂಡುರಂಗ ಹೊಟೆಲ್ ಎದುರಿನಲ್ಲಿರುವ ಪೆಟ್ರೋಲ್ ಬಂಕ್ ಗೆ ತೆರಳಲು ಕಾರ್ ಚಾಲಕ ತನ್ನ ಕಾರಿನ ಇಂಡಿಕೇಟರ್ ಸಿಗ್ನಲ್ ಕೊಟ್ಟು ಹೋಗುತ್ತಿರುವಾಗ ಹೆಗಡೆ ಕ್ರಾಸ್‌ನಿಂದ ವೇಗವಾಗಿ ಬೈಕ್ ಚಲಾಯಿಸಿ ಬಂದ ಬೈಕ್ ಸವಾರ ಇನೋವಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿ ಇದ್ದವರು ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.

RELATED ARTICLES  ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ : ನನ್ನ ಸಿದ್ಧಾಂತಕ್ಕೆ ‌ನಾನು ಬದ್ಧ ಎಂದ ಸಂಸದ ಅನಂತ ಕುಮಾರ್ ಹೆಗಡೆ

ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.