ಹೊನ್ನಾವರ : ಇಲ್ಲಿನ ಎಸ್ ಡಿ ಎಂ ಕಾಲೇಜಿನಲ್ಲಿ ಇತ್ತೀಚಿಗೆ ಶ್ರೀ ಶ್ರೀಧರ ಭಟ್ಟಕೆಕ್ಕಾರು ಇವರ ಅಧ್ಯಕ್ಷತೆಯಲ್ಲಿ ಎಂ. ನಾರಾಯಣ ಭಟ್ಟರ ಎಂಬತ್ತರ ಅಭಿನಂದನಾ ಹೊತ್ತಿಗೆ ‘ಕಲಾನಿಧಿ’ ಬಿಡುಗಡೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಶಿಷ್ಯರಿಂದ, ಒಡನಾಡಿಗಳಿಂದ ಎಂ. ನಾರಾಯಣ ಭಟ್ಟರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ರೀ ಶ್ರೀಕಾಂತ ಭಟ್ಟ ಕೆಕ್ಕಾರು ಎಲ್ಲರ ಪರವಾಗಿ ಎಂ. ನಾರಾಯಣ ಭಟ್ಟರನ್ನು ಅಭಿನಂದಿಸಿ, ಶ್ರೀಯುತರ ಜೀವನ ಪ್ರೀತಿ, ಸಾಹಿತ್ಯ ಪ್ರೀತಿ, ಚತುರ್ ಭಾಷಾ ಪ್ರಾಮುಖ್ಯತೆ, ಚಿತ್ರಕಲೆ, ಸಂಗ್ರಹ, ಕೃಷಿ, ಅಧ್ಯಯನ, ಅಧ್ಯಾಪನ ಮುಂತಾದ ಪ್ರವೃತ್ತಿಯ ಸುಸಂಸ್ಕೃತಜೀವನ ವಿಧಾನವನ್ನು ಸಭೆಗೆ ಪರಿಚಯಿಸಿದರು.

RELATED ARTICLES  ಅಂಕೋಲಾದಲ್ಲಿ ಇಂದಿರಾ ಕ್ಯಾಂಟಿನ್‌ ಉದ್ಘಾಟನೆ : ಅಗತ್ಯ ಇದ್ದವರು ಸದುಪಯೋಗ ಪಡೆಯಲು ಗಣ್ಯರ ಕರೆ.

ಡಾ. ಪತಂಜಲಿ ವೀಣಾಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಧರ ಭಟ್ಟ ಅಧ್ಯಕ್ಷೀಯ ಮಾತುಗಳನ್ನಾಡುತ್ತ ಕಷ್ಟ ಸಹಿಷ್ಣುವಾಗಿ, ಉತ್ತಮ ಸಂಸಾರಿಯಾಗಿ ಬಾಳಿದ ಎಂ. ನಾರಾಯಣ ಭಟ್ಟರ ವ್ಯಕ್ತಿತ್ವವನ್ನು ಕೊಂಡಾಡಿದರು. ಪ್ರೊ. ನಾಗರಾಜ ಹೆಗಡೆ ಅಪಗಾಲ, ಪ್ರೊ. ಪ್ರಶಾಂತ ಮೂಡಲಮನೆ ಕಾರ್ಯಕ್ರಮ ನಿರೂಪಿಸಿ, ಎಲ್ಲರನ್ನೂ ವಂದಿಸಿದರು.

‘ಎಲ್ಲರೊಳಗೊಂದಾಗಿ, ಖ್ಯಾತ ವಾಗ್ನಿ, ವಿದ್ಯಾ ವಾಚಸ್ಪತಿ, ತಾಳ ಮದ್ದಲೆ ಅರ್ಧದಾರಿ ಉಪಕಾಂತ ಭಟ್ಟ ಕೆರೆಕೈ ‘ಕಲಾನಿಧಿ’ ಗ್ರಂಥವನ್ನು ಬಿಡುಗಡೆಗೊಳಿಸಿ ‘ನಾರಾಯಣ ಭಟ್ಟರ ಸರಳತೆ, ಜೀವನ ಪ್ರೇಮ, ಕಳಕಳಿಯನ್ನು ಸಮಾಜ ಗುರುತಿಸಿದ್ದು ಅರ್ಥಪೂರ್ಣ ಮುಂದೆಯೂ ಈ ಕಾರ್ಯ ನಡೆಯಲಿ’ ಎಂದು ಅಭಿಪ್ರಾಯಪಟ್ಟರು. ನಂತರ ಯಕ್ಷಗಾನ, ತಾಳಮದ್ದಲೆ, ಶ್ರೀರಾಮ ನಿರ್ಯಾಣ ನಡೆಯಿತು. ರಾಮನಾಗಿ ವಿದ್ಯಾನ್ಉಮಾಕಾಂತ ಭಟ್ಟ, ಲಕ್ಷ್ಮಣನಾಗಿ ಶ್ರೀ ನಾರಾಯಣ ಯಾಜಿ ಸಾಲೆಬೈಲ್, ದೂರ್ವಾಸನಾಗಿ ಡಾ. ಜಿ.ಕೆ. ಹೆಗಡೆ ಹರಿಕೇರಿ, ಕಾಲ ಪುರುಷನಾಗಿ ಶ್ರೀ ಶಿವಾನಂದ ಹೆಗಡೆ ಕೆರೆಮನೆ ಸೊಗಸಾಗಿ ಪಾತ್ರ ನಿರ್ವಹಣೆ ಮಾಡಿದರು. ಉದ್ಯಮಿ ಶ್ರೀ ಎಂ.ಎನ್. ಶ್ರೀರಾಮ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿ, ಊಟದ ವ್ಯವಸ್ಥೆ ಕಲ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

RELATED ARTICLES  ಕುಮಟಾದ ಹಲವೆಡೆ ಶಾರದಾ ಶೆಟ್ಟಿಯವರಿಂದ ಬಿರುಸಿನ‌ ಪ್ರಚಾರ ಕಾರ್ಯ