ಕುಮಟಾ : ‘ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಬರ್ಗಿ’ ಇವರ 11 ನೇ ವರ್ಷದ ಶಾರದೋತ್ಸವದ ಸಂದರ್ಭದ ನಾಲ್ಕನೇ ದಿನ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ನಾಗರಾಜ ನಾಯಕ ತೊರ್ಕೆಯವರು ಬರ್ಗಿಯಲ್ಲಿ ಕಳೆದ 2 ವರ್ಷಗಳಲ್ಲಿ ಸುಮಾರು 15 ಬಾರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಈ ಊರಿನ ಯುವಕರ ಮತ್ತು ವಿವಿಧ ಸಂಘಟನೆಗಳ ಕಾರ್ಯವನ್ನು, ಸಂಘಟನಾ ಚಾತುರ್ಯವನ್ನು ಮನಸಾರೆ ಹೊಗಳಿದರು. ಅಂತೆಯೇ ಈ ವರ್ಷವೂ ಕೂಡಾ ಊರ ಹಿರಿಯರಾದ 95 ವರ್ಷದ ಬಾಬು ಪಟಗಾರ, ಅತ್ಯಂತ ಶ್ರದ್ಧಾನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಲೈನಮನ್ ವಿನಾಯಕ ಎಲ್. ಗುನಗ ಹಾಗೂ ಓರ್ವ ದಾನಿ ಮಂಜುನಾಥ ಎನ್. ನಾಯಕ ಈ ಮೂವರನ್ನು ಸನ್ಮಾನಿಸುತ್ತಿರುವುದು ನಿಜವಾಗಿಯೂ ಅರ್ಥಪೂರ್ಣವಾಗಿದೆ. ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅವರನ್ನು ಸನ್ಮಾನಿಸಬೇಕಾಗಿರುವುದು ಸಾಮಾಜಿಕ ಕರ್ತವ್ಯವಾಗಿದ್ದು ಅದನ್ನು ಬರ್ಗಿಯ ಸಾರ್ವಜನಿಕ ಶಾರದೋತ್ಸವ ಸಮಿತಿಯು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಈ ಸಮಿತಿಯು ಧಾರ್ಮಿಕ ಆಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು ಮುಂದಿನ ಪೀಳಿಗೆಯವರು ಸಹಿತ ಭಾರತೀಯ ಸಂಸ್ಕøತಿ, ಹಿಂದೂ ಧರ್ಮದ ಆಚರಣೆಗಳು, ಹಿಂದೂ ಧರ್ಮ ಈ ಕುರಿತಾಗಿ ಹೆಚ್ಚು ಹೆಚ್ಚು ತಿಳುವಳಿಕೆ ಹೊಂದಿರಬೇಕಾದುದು ಇಂದಿನ ಅಗತ್ಯತೆ ಹಾಗೂ ಅನಿವಾರ್ಯತೆ ಎಂದು ಒತ್ತಿ ಹೇಳಿದರು ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿಜ್ರಂಭಣೆಯಿಂದ ಶಾರದೋತ್ಸವ ನಡೆಯಲಿ ಎಂದು ಹಾರೈಸಿದರು.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 82 ಕರೊನಾ ಕೇಸ್

ಈ ಸಂದರ್ಭದಲ್ಲಿ ಹಾಜರಿದ್ದ ಮುಖ್ಯ ಅತಿಥಿಗಳಾದ ಪ್ರದೀಪ ನಾಯಕ ರವರು ಮಾತನಾಡಿ ಶಾರದೋತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಿದ್ದು ಈ ರೀತಿಯ ಆಚರಣೆ ಇನ್ನೂ ಹೆಚ್ಚಿನ ವಿಜ್ರಂಭಣೆಯಿಂದ ನಡೆಯಲಿ ಎಂದು ಹಾರೈಸಿದರು.

RELATED ARTICLES  ಯಶಸ್ವಿಯಾಗಿ ಸಂಘಟಿತವಾದ ರವಿರಾಜ ಟ್ರೋಫಿ: ಸಂಘಟಕರಿಗೆ ಅಭಿನಂದನೆ

ಕಾರ್ಯಕ್ರಮದ ವೇದಿಕೆಯಲ್ಲಿ ಆನಂದು ನಾಯಕ ಬರ್ಗಿ, ಗೋವಿಂದ ಆರ್ ನಾಯಕ, ವಿನಾಯಕ ಗುನಗ, ಅಗ್ನಿಸಾಕ್ಷಿ ಧಾರಾವಾಹಿಯ ನಟ ಸಂಪತ್, ಸಮಿತಿಯ ಅಧ್ಯಕ್ಷ ವಿಘ್ನೇಶ ಬಿ. ಗುನಗ, ಸದಸ್ಯರಾದ ರಾಜು ನಾಯಕ, ಮಹೇಶ ನಾಯಕ, ಮಾದೇವ ಪಟಗಾರ, ಸಂತು ಗಾಂವಕರ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು. ಬೀರಣ್ಣ ಗಾಂವಕರರು ನಿರೂಪಿಸಿ ವಂದಿಸಿದರು.