ಹೊನ್ನಾವರ: ತಾಲೂಕಿನ ಮಾವಿನಕುರ್ವಾದ ಯುವಕ ಕೃಷ್ಣ ಗೌಡ ಅವರು ಚಿತ್ರಿಸಿರುವ ಪೆನ್ಸಿಲ್ ಆರ್ಟ್ ಮತ್ತೊಮ್ಮೆ ಎಲ್ಲರ ಗಮನಸೆಳೆಯುತ್ತಿದೆ. ಅವರು ಬಿಡಿಸಿದ ವೃಕ್ಷಮಾತೆ ತುಳಿಸಿ ಗೌಡ ಅವರ ಚಿತ್ರ ಇದೀಗ ನೋಡುಗರು ಹುಬ್ಬು ಏರಿಸುವಂತೆ ಮಾಡಿದೆ. ನೈಜತೆಯನ್ನು ಮೈವೆತ್ತತ್ತಂತೆ ಬಂದಿರುವ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯಾವುದೇ ಕಲಾಶಾಲೆಯಿಂದ ತರಬೇತಿ ಪಡೆಯದಿದ್ದರೂ ವಿದ್ಯಾರ್ಥಿದೆಸೆಯಲ್ಲಿರುವಾಗ ಪೆನ್ಸಿಲ್ ಆರ್ಟ್ನಲ್ಲಿ ಪ್ರಭುತ್ವ ಸಾಧಿಸಿರುವ ಕೃಷ್ಣ, ಅನೇಕ ಚಿತ್ರವನ್ನು ಬಿಡಿಸುವ ಮೂಲಕ ಎಲ್ಲರನ್ನು ತನ್ನತ್ತ ಸೆಳೆದಿದ್ದಾರೆ. ಚಿಕ್ಕ ಮಕ್ಕಳ ನಗು, ಸಿನಿಮಾ ರಂಗದ ಕಲಾವಿದರು, ಜನಪ್ರತಿನಿಧಿಗಳು, ಮಠಾಧೀಶರ ಭಾವಚಿತ್ರ ಬಿಡಿಸುವ ಮೂಲಕ ಮೆಚ್ಚುಗೆ ಪಡೆದಿದ್ದರು.

ಇವರು ಬಿಡಿಸಿದ ಚಿತ್ರಗಳನ್ನು ನೋಡುತ್ತಾ ಹೋದರೆ ಮೂಕವಿಸ್ಮಿತರಾಗಿಸುತ್ತದೆ. ತಕ್ಷಣಕ್ಕೆ ನೋಡಿದರೆ ಮೂಲ ಚಿತ್ರ ಯಾವುದು ಬಿಡಿಸಿದ ಚಿತ್ರ ಯಾವುದು ಎಂದು ಗುರುತಿಸುವುದು ಕಷ್ಟವಾಗುತ್ತದೆ. ಅಂತಹ ಅದ್ಭುತ ಚಿತ್ರಗಳನ್ನು ಪೆನ್ಸಿಲ್‌ನಲ್ಲಿ ಸೃಷ್ಟಿಸುವ ಕೃಷ್ಣ ಏಕಲವ್ಯನಂತೆ ಮನಸ್ಸನ್ನೇ ಗುರುವಾಗಿಸಿಕೊಂಡು ತಪಸ್ಸಿನಂತ ಪರಿಶ್ರಮದಿಂದ ಕಲೆಯನ್ನು ಒಲಿಸಿಕೊಂಡ ಹುಡುಗನಾಗಿದ್ದು, ಇತ್ತೀಚಿಗೆ ಬಿಡಿಸಿದ ಪದ್ಮಶ್ರೀ ಪ್ರಶಸ್ತ್ರೀ ವಿಜೇತರಾದ ತುಳಸಿಗೌಡ ಇವರ ಚಿತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು ಇವರು ರಾಜ್ಯೋತ್ಸವದಂದು ಆಯೋಜಿಸಿದ ಸ್ಪರ್ಧೆಗೆ ಈ ಆರ್ಟ್ಸ್ ಆಯ್ಕೆಯಾಗಿದೆ. ಅಲ್ಲದೆ ಇದರ ಜೊತೆಗೆ ಇನ್ನೊರ್ವ ಪ್ರಶಸ್ತ್ರಿ ಪುರಸ್ಕೃತರಾದ ಸುಕ್ರಜ್ಜಿ ಆರ್ಟ್ ಕೂಡಾ ಬಿಡಿಸುತ್ತಿರುವುದು ವಿಶೇಷವಾಗಿದೆ.

RELATED ARTICLES  ಸಿಡಿಲು ಬಡಿದು ಮಹಿಳೆ ಸಾವು: ಸಂತಾಪ ಸೂಚಿಸಿದ ಭೀಮಣ್ಣ ನಾಯ್ಕ