ಭಟ್ಕಳ : ಹೆಬಳೆಯ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಎರಡೂವರೆ ಲಕ್ಷ ಧನಸಹಾಯವನ್ನು ಮಂಜೂರಿ ಮಾಡಿರುತ್ತಾರೆ. ಇದರ ಡಿ.ಡಿ.ಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಟ್ಕಳ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಗಣೇಶ ನಾಯ್ಕರವರು ಇವತ್ತು ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹೆಬಳೆ ವಲಯದ ಮೇಲ್ವಿಚಾರಕಿ ಸುಶೀಲಾ, ಸೇವಾಪ್ರತಿನಿಧಿ ನಾಗರತ್ನ, ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಧರ ನಾಯ್ಕ, ಸದಸ್ಯರುಗಳಾದ ಎಂ.ಡಿ.ನಾಯ್ಕ, ಶ್ರೀಧರ ನಾಯ್ಕ, ಗಣೇಶ ದೇವಡಿಗ, ಪಂಚಾಯತ್ ಸದಸ್ಯ ರಾಮ ಹೆಬಳೆ, ಊರಿನ ಗಣ್ಯರುಗಳಾದ ಮಂಜುನಾಥ ನಾಯ್ಕ, ಸುಬ್ರಾಯ ದೇವಡಿಗ ಹಾಗೂ ಕುಪ್ಪ ನಾಯ್ಕ ಹಾಜರಿದ್ದರು. ಆಡಳಿತ ಮಂಡಳಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯರಿಗೆ ಧನ್ಯವಾದಗಳನ್ನು ಕೂಡ ಸಲ್ಲಿಸಿರುತ್ತಾರೆ.

RELATED ARTICLES  ಯಲಕೊಟ್ಟಿಗೆ ಶಾಲೆಯಲ್ಲಿ ಕೊಡುಗೆ ಸ್ವೀಕಾರ ಕಾರ್ಯಕ್ರಮ