ಕುಮಟಾ: ಇಲ್ಲಿನ ಶಾಂತಿಕಾ ಕಲಾರಂಗದ ಸಹಕಾರದಲ್ಲಿ ಪಟ್ಟಣದ ಗಿಬ್ ಹೈಸ್ಕೂಲ್ ಬುರ್ಡೇಕರ್ ಸಭಾಭವನದ ಬಳಿ ಕಮತಗಿಯ ಶ್ರೀಗುರು ಹೊಳೆಹುಚ್ಚೇಶ್ವರ ನಾಟ್ಯ ಸಂಘದಿಂದ ಕಲಾಕೇಸರಿ ಮಹೇಶ ಕಲ್ಲೊಳ ವಿರಚಿತ ‘ಮಾನವಂತರ ಮನೆ’ ಎಂಬ ನಾಟಕವನ್ನು ನ. 11ರಿಂದ ಸಂಜೆ 6 ಗಂಟೆ ಹಾಗೂ 9 ಗಂಟೆಗೆ ಪ್ರತಿನಿತ್ಯ ಎರಡು ಬಾರಿ ಪ್ರದರ್ಶಿಸಲಾಗುವುದು ಎಂದು ಶಾಂತಿಕಾ ಕಲಾರಂಗದ ಅಧ್ಯಕ್ಷ ಶ್ರೀಧರ ನಾಯ್ಕ ವಕ್ಕನಳ್ಳಿ ಮತ್ತು ನಾಟಕ ಮಂಡಳಿಯ ಅಧ್ಯಕ್ಷ ಫಯಾಜ ಕರ್ಜಗಿ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಕರ್ನಾಟಕದಾದ್ಯಂತ 10 ಸಾವಿರಕ್ಕೂ ಹೆಚ್ಚು ಪ್ರದರ್ಶನಗೊಂಡ ‘ಮಾನವಂತರ ಮನೆ’ ನಾಟಕವು ಸುಂದರ ಸಾಮಾಜಿಕ ಮತ್ತು ವ್ಯಕ್ತಿಗತ ಮೌಲ್ಯಗಳನ್ನು ಎತ್ತಿಹಿಡಿಯುವ ಕಥಾವಸ್ತುವನ್ನು ಒಳಗೊಂಡಿದೆ. ಹಾಸ್ಯ, ದುರಂತ, ಪ್ರೇಮ, ಪ್ರೀತಿ, ಸಾಂಸಾರಿಕ ಸುಖ- ದುಃಖಗಳ ಸನ್ನಿವೇಶಗಳನ್ನು ಒಳಗೊಂಡ ಸಾಮಾಜಿಕ ಕಥೆಯಾಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ 5 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ನಾಟಕ ಇದಾಗಿದೆ. ಸಾರ್ವಜನಿಕರು ಕುಟುಂಬ ಸಮೇತ ಬಂದು ನಾಟಕವನ್ನು ವೀಕ್ಷಿಸಿ. ನಾಟಕ ಕಲೆ ಹಾಗೂ ನಾಟಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಜಿ.ಎಸ್. ಭಟ್ಟ, ಎಂ.ಟಿ. ನಾಯ್ಕ, ಗಣೇಶ ಭಟ್ಟ, ನಾರಾಯಣ ನಾಗೇಕರ, ಅಶೋಕ ಗೌಡ, ವೆಂಕಟರಮಣ ಹೆಗಡೆ, ರಾಮು ಅಡಿ, ಗಣಪತಿ ಹೆಗಡೆ, ರವಿ ನಾಯ್ಕ ಇನ್ನಿತರರು ಇದ್ದರು.

RELATED ARTICLES  ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಿಗೀತೆ ಆಡಿಯೋ ಬಿಡುಗಡೆ